ಕಾನೂನು ಅರಿವು ಪ್ರತಿ ನಾಗರಿಕನ ಮೂಲಭೂತ ಆದ್ಯತೆಯಾಗಲಿ, ನ್ಯಾ ಅಮೋಲ ಹಿರೇಕೊಡಿ

ಬಾಲ್ಯ ವಿವಾಹ, ಮಹಿಳೆ ಮಕ್ಕಳ ಮೇಲಿನ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ, ಸೇರಿದಂತೆ ಸಮಾಜದಲ್ಲಿ ನಿತ್ಯ ಅನೇಕ ಅಪರಾಧ ಕೃತ್ಯಗಳು ನಡೆಯಲು ಜನರಲ್ಲಿ ಕಾನೂನುಗಳ ಅರಿವಿಲ್ಲದಿರುವುದೇ ಮುಖ್ಯ ಕಾರಣ. ಆದ್ದರಿಂದ ಕಾನೂನು ಅರಿವು ನಮ್ಮ ಮೂಲಭೂತ ಅಗತ್ಯವಾಗಲಿ ಎಂದು ನಾಲ್ಕನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶ ಅಮೋಲ ಹಿರೇಕೊಡಿ ಹೇಳಿದರು. ಇನ್ನು ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಧಾರವಾಡದಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾನೂನಿನ ಅರಿವು ಮತ್ತ ಪಾಲನೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಹಳ್ಳಿ ಹಳ್ಳಿಗೆ ಮನೆ ಮನೆಗೆ ಕಾನೂನು ಅರಿವು ಮೂಡಿಸುವ ಜತೆಗೆ ಅರ್ಹರಿಗೆ ಕಾನೂನಿನ ನೆರವು ನೀಡುವ ಘನ ಉದ್ದೇಶದಿಂದ ಸರ್ವೋಚ್ಚ ನ್ಯಾಯಾಲಯ ಆರಂಭಿಸಿದ ಈ ಅಭಿಯಾನ ಯಶಸ್ವಿಗೊಳಿಸಲು ಮುಂದಾಗಬೇಕು ಎಂದರು...