ಕಾನ್ಸ್ಟೇಬಲ್ ಹುದ್ದೆಯ ನೇಮಕಾತಿಗೆ ವಯೋಮಿತಿ ಹೆಚ್ಚಿಸುವಂತೆ ಗೃಹ ಸಚಿವರ ಕಾಲಿಗೆ ಬಿದ್ದು ಆಕಾಂಕ್ಷಿಗಳ ಮನವಿ
ತುಮಕೂರು: ಜಿಲ್ಲೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದಾರೆ. ಈ ವೇಳೆ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ನೇಮಕಾತಿಗೆ ಪ್ರಕ್ರಿಯೆಯಲ್ಲಿ ವಯೋಮಿತಿ ಹೆಚ್ಚಿಸುವಂತೆ ಆಕಾಂಕ್ಷಿಗಳು ಗೃಹ ಸಚಿವರ ಕಾಲಿಗೆ ಬಿದ್ದು ಮನವಿ ಮಾಡಿದ್ದಾರೆ. ಜಿಲ್ಲೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಮನವಿ ಪತ್ರ ನೀಡಿದ ನಂತರ ಕಣ್ಣೀರು ಹಾಕುತ್ತ ಕಾಲಿಗೆ ಬಿದ್ದು ಕೇಳಿಕೊಂಡರು.ಪೊಲೀಸ್ ಇಲಾಖೆಯಲ್ಲಿ ಸಿಎಆರ್ ಮತ್ತು ಡಿ.ಎ. 20 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಸಾಮಾನ್ಯ ವರ್ಗಕ್ಕೆ ಗರಿಷ್ಠ 25, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷಗಳನ್ನು ನಿಗದಿಪಡಿಸಲಾಗಿರುತ್ತದೆ.