ತುಮಕೂರು: ಮಾಜಿ ಡಿಸಿಎಂ ಪರಮೇಶ್ವರ್ಗೆ ಕುರಿಗಳನ್ನು ಕೊಡುಗೆಯಾಗಿ ನೀಡಿದ ಕಾಂಗ್ರೆಸ್ ಕಾರ್ಯಕರ್ತ
ತುಮಕೂರು ತಾಲೂಕಿನ ಸಿದ್ದಾರ್ಥ ನಗರದಲ್ಲಿರುವ ಪರಮೇಶ್ವರ್ ನಿವಾಸಕ್ಕೆ ತೆರಳಿ, ಕೊರಟಗೆರೆ ತಾಲೂಕಿನ ಗೊಡ್ರಹಳ್ಳಿ ಉಮಾಶಂಕರ್ ಕುರಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ತುಮಕೂರು: ಮಾಜಿ ಡಿಸಿಎಂ ಪರಮೇಶ್ವರ್ಗೆ ಕೊರಟಗೆರೆ ಕ್ಷೇತ್ರದ ಕುರುಬ ಸಮುದಾಯದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಕುರಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ತುಮಕೂರು ತಾಲೂಕಿನ ಸಿದ್ದಾರ್ಥ ನಗರದಲ್ಲಿರುವ ಪರಮೇಶ್ವರ್ ನಿವಾಸಕ್ಕೆ ತೆರಳಿ, ಕೊರಟಗೆರೆ ತಾಲೂಕಿನ ಗೊಡ್ರಹಳ್ಳಿ ಉಮಾಶಂಕರ್ ಕುರಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಉಡುಗೊರೆಯಾಗಿ ಬಂದ ಎರಡು ಕುರಿಗಳಿಗೆ ಪರಮೇಶ್ವರ್, ಹೂವಿನ ಹಾರ ಹಾಕಿ, ಆರತಿ ಬೆಳಗಿ ಪೂಜೆ ಸಲ್ಲಿಸಿದ್ದಾರೆ.
ವಿಜಯಪುರ: ಕುರಿಗಳನ್ನು ಕದಿಯಲು ಬಂದಿದ್ದ ಕಳ್ಳರ ಕಾರು ಪಲ್ಟಿ
ಕುರಿಗಳನ್ನು ಕದಿಯಲು ಬಂದಿದ್ದ ಕಳ್ಳರ ಕಾರು ಪಲ್ಟಿಯಾದ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮೂಕರ್ತಿಹಾಳ ಗ್ರಾಮದ ಬಳಿ ನಡೆದಿದೆ. ಮೂಕರ್ತಿಹಾಳ ಗ್ರಾಮದಲ್ಲಿ ಕುರಿಗಳನ್ನು ಕದಿಯಲು ಕಾರು ಸಮೇತ ಆಗಮಿಸಿದ್ದ ಕಳ್ಳರ ಕಾರು ಪಲ್ಟಿ ಆಗಿದ್ದು, ಬಳಿಕ ಕದೀಮರು ಪರಾರಿಯಾಗಿದ್ದಾರೆ.
ಕುರಿಗಳನ್ನು ಕದಿಯಲು ಮುಂದಾದಾಗ ಕಳ್ಳರ ನೋಡಿ ಕುರಿಗಾಹಿಗಳು ಚೀರಿದ್ದು, ತಪ್ಪಿಸಿಕೊಳ್ಳಲು ಕಳ್ಳರು ತಕ್ಷಣ ಕಾರಿನಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ ತಾಳಿಕೋಟೆಯತ್ತ ಆಗಮಿಸಿದ ಕಳ್ಳರು, ಡೋಣಿ ನದಿ ಸೇತುವೆ ಜಲಾವೃತವಾದ ಕಾರಣ ವಾಪಸ್ ಮೂಕರ್ತಿಹಾಳ ಗ್ರಾಮದತ್ತ ಕಾರಿನಲ್ಲಿ ತೆರಳಿದ್ದಾರೆ. ಆಗ ಕಳ್ಳರು ಬಂದಿದ್ದ ಸುದ್ದಿಯಿಂದ ಬಡಿಗೆ ಹಿಡಿದು ಜಮಾಯಿಸಿದ್ದ ಗ್ರಾಮಸ್ಥರನ್ನು ಕಂಡು ಭಯಗೊಂಡು, ಅಲ್ಲಿಂದ ಪರಾರಿಯಾಗುವ ವೇಳೆ ಕಳ್ಳರ ಕಾರ್ ಪಲ್ಟಿಯಾಗಿದ್ದು, ಕೂಡಲೇ ಕಾರ್ ಬಿಟ್ಟು ಕಳ್ಳರು ಅಲ್ಲಿಂದ ಓಡಿ ಹೋಗಿದ್ದಾರೆ.
ಕದ್ದಿದ್ದ ಕುರಿಗಳನ್ನು KA 03 – AE 2627 ನಂಬರಿನ ಕಾರಿಲ್ಲಿಯೇ ಬಿಟ್ಟು ಸದ್ಯ ಕಳ್ಳರು ಪರಾರಿಯಾಗಿದ್ದು, ಕಾರನ್ನೂ ಸಹ ಕಳ್ಳತನ ಮಾಡಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ತಾಳಿಕೋಟೆ ಪೊಲೀಸರು ಭೇಟಿ ನೀಡಿದ್ದು, ಗ್ರಾಮಸ್ಥರ ಬಳಿ ಸಮಗ್ರ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಕಳ್ಳರ ಬಂಧನಕ್ಕೆ ತಾಳಿಕೋಟೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.