ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ನರ್ಸಿಂಗ್ ಶಿಕ್ಷಣ ಪಾತ್ರ ಮಹತ್ವದ್ದು

ಹರ್ಷ ಸಮೂಹ ಶಿಕ್ಷಣ ಸಂಸ್ಥೆ ಎಂವಿ.ಎಂ ಕಲ್ಯಾಣ ಮಂಟದಲ್ಲಿ ನರ್ಸಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಜರುಗಿತು. ಮುಖ್ಯಅತಿಥಿಗಳಾಗಿದ್ದ ಎಂ.ಎಸ್.ರಾಮಯ್ಯ ಆಸ್ಪತ್ರೆ ಅಧ್ಯಕ್ಷ ಡಾ.ಕೆ.ಸಿ ಗುರುದೇವ್ ಮಾತನಾಡಿ, ಶಿಕ್ಷಣ ಬೆಲೆ ಕಟ್ಟಲಾಗದ ವಸ್ತು ಅಭಿಪ್ರಾಯಪಟ್ಟರು. ಬೆಂಗಳೂರು ಕೆಂಪೇಗೌಡ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ವಿ.ಟಿ.ಲಕ್ಷ್ಮಮ್ಮ ಮಾತನಾಡಿ ನರ್ಸಿಂಗ್ ಕ್ಷೇತ್ರದ ಅವಿಸ್ಮರಣೀಯರಾದ ಪ್ಲಾರೆನ್ಸ್ ನೈಟಿಂಗೇಲ್ ಆದರ್ಶಗಳನ್ನು ನರ್ಸಿಂಗ್ ವಿದ್ಯಾರ್ಥಿಗಳು ಅನುಸರಣೆ ಮಾಡಬೇಕಿದೆ. ಶುಶ್ರೂಷಕ ವೃತ್ತಿ ಕೀಳಲ್ಲ. ಅದೊಂದು ಶ್ರೇಷ್ಠ ವೃತ್ತಿಯಾಗಿದೆ ಎಂದರು. ಕೋವಿಡ್ನ ೨ನೇ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಹರ್ಷರಾಮಯ್ಯ ಆಸ್ಪತ್ರೆಯ ಶುಶ್ರೂಷಕರು ಹಾಗೂ ವೈದ್ಯರನ್ನು ಈ ವೇಳೆ ಸನ್ಮಾನಿಸಲಾಯಿತು.