ವಿಧಾನ ಪರಿಷತ್ ಚುನಾವಣೆ: ಕೊಡಗು- ಬಿಜೆಪಿಯ ಸುಜಾ ಕುಶಾಲಪ್ಪಗೆ ಗೆಲುವು

ವಿಧಾನ ಪರಿಷತ್ ಚುನಾವಣೆ: ಕೊಡಗು- ಬಿಜೆಪಿಯ ಸುಜಾ ಕುಶಾಲಪ್ಪಗೆ ಗೆಲುವು

ಮಡಿಕೇರಿ: ಕೊಡಗು ಕ್ಷೇತ್ರದಿಂದ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದರು.

ಬಿಜೆಪಿ ಅಭ್ಯರ್ಥಿ ಸುಜಾ 705 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್‌ಗೌಡ ಅವರು 603 ಮತಗಳನ್ನು ಪಡೆದರು.

17 ಮತಗಳು ತಿರಸ್ಕೃತಗೊಂಡಿವೆ. 1,325 ಮತಗಳು ಚಲಾವಣೆಗೊಂಡಿದ್ದವು.