ಹುಟ್ಟು ಹಬ್ಬದ ದಿನವೇ ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆ : ಇದು ದೈವ ಇಚ್ಚೆ ಎಂದ 'ಸಿಎಂ ಬೊಮ್ಮಾಯಿ'
ಶಿವಮೊಗ್ಗ : ಯಡಿಯೂರಪ್ಪ ಹುಟ್ಟು ಹಬ್ಬದ ದಿನವೇ ಏರ್ ಪೋರ್ಟ್ ಉದ್ಘಾಟನೆಯಾಗುತ್ತಿರುವುದು ದೈವ ಇಚ್ಚೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ ಬಿಎಸ್ವೈ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ, ಮಲೆನಾಡಿನ ಆರ್ಥಿಕ ಹಾಗೂ ಪ್ರವಾಸೋದ್ಯಮಕ್ಕೆ ಸಹಾಯಕವಾಗಲಿದೆ.
ಶಿವಮೊಗ್ಗ ಏರ್ಪೋರ್ಟ್ ಲೋಕಾರ್ಪಣೆ ಮರೆಯಲಾಗದ ಕ್ಷಣ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.ಸುದ್ದಿಗಾರರ ಜೊತೆ ಮಾತನಾಡಿದ ವಿಜಯೇಂದ್ರ , ಇಡೀ ರಾಜ್ಯಾದ್ಯಂತ ಯಡಿಯೂರಪ್ಪ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ, ಶಿವಮೊಗ್ಗ ಏರ್ಪೋರ್ಟ್ ಲೋಕಾರ್ಪಣೆ ಮರೆಯಲಾಗದ ಕ್ಷಣ. ಮೋದಿ ಏರ್ಪೋರ್ಟ್ ಉದ್ಘಾಟನೆ ಮಾಡುತ್ತಿರುವುದು ನಮ್ಮ ಸೌಭಾಗ್ಯ ಎಂದು ವಿಜಯೇಂದ್ರ ಹೇಳಿದರು.