ಬೆಂಗಳೂರು ವಿವಿ ಆವರಣದಲ್ಲಿ ಕಾಣಿಸಿಕೊಂಡ ಚಿರತೆ: ವಿದ್ಯಾರ್ಥಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಆವರಣದಲ್ಲಿ ಚಿರತೆ ಕಾಣಿಸಿಕೊಂಡಿರೋದಾಗಿ ತಿಳಿದು ಬಂದಿದೆ. ಹೀಗಾಗಿ ವಿದ್ಯಾರ್ಥಿಗಳು ಜಾಗರೂಕತೆಯಿಂದ ಇರುವಂತೆ ವಿವಿ ಸೂಚಿಸಿದೆ.
ಈ ಸಂಬಂಧ ಬೆಂಗಳೂರು ವಿವಿಯ ಕುಲಸಚಿವರು ಸುತ್ತೋಲೆ ಹೊರಡಿಸಿದ್ದು, ವಿವಿಯ ಆವರಣದಲ್ಲಿ ವನ್ಯಜೀವಿಯಾದ ಚಿರತೆಯು ಕಾಣಿಸಿಕೊಂಡಿರೋ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾದ ನಂತ್ರ ತಿಳಿದು ಬಂದಿದೆ.
ಇನ್ನೂ ರಾತ್ರಿ ವೇಳೆಯಲ್ಲಿ ಸಂಚರಿಸುವುದನ್ನು ನಿಯಂತ್ರಣಗೊಳಿಸುವಂತೆ ತಿಳಿಸಿರುವಂತ ವಿವಿಯೂ, ಆವರಣದಲ್ಲಿ ಎಲ್ಲಾದರೂ ಚಿರತೆಯ ಸಂಚಾರ ಕಂಡು ಬಂದಲ್ಲಿ ತಕ್ಷಣವೇ ಮೇಲಾಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಿದೆ. ಅಲ್ಲದೇ ಈಗಾಗಲೇ ಚಿರತೆ ಸೆರೆಗೆ ಅರಣ್ಯ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಕೋರಲಾಗಿರೋದಾಗಿ ಹೇಳಿದೆ.