ಇಂದು ಭಾರತ-ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯ

ಐಸಿಸಿ T20 ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಸೋತ ಭಾರತ & ನ್ಯೂಜಿಲೆಂಡ್ ತಂಡಗಳು ವಿಶ್ರಾಂತಿಯ ಬಳಿಕ ಮತ್ತೆ ಮುಖಾಮುಖಿ ಆಗಲಿವೆ. ಟೀಂ ಇಂಡಿಯಾ 3 ಪಂದ್ಯಗಳ ಟಿ20 ಸರಣಿ & ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಈ ಪೈಕಿ ಇಂದು (ನ.18) ವೆಲ್ಲಿಂಗ್ಟನ್‌ನ ಸ್ಲೈ ಸ್ಟೇಡಿಯಂನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ದದ ಮೊದಲ ಟಿ20 ಪಂದ್ಯವನ್ನು ಆಡಲಿದೆ. ಉತ್ಸಾಹಿ ತರುಣರಿಂದ ತಂಡ ಕೂಡಿದ್ದು, ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ಅಭ್ಯಾಸದಲ್ಲಿ ನಿರತವಾಗಿದೆ.