ಧಾರವಾಡ ಬಸ್ ನಿಲ್ದಾಣಗಳಲ್ಲಿಯೆ ನಿದ್ರೆಗೆ ಜಾರಿ ಸ್ವಚ್ಚತೆಗೆ ಭಂಗ ತರುವ ಕುಡುಕರು

ಧಾರವಾಡ ಸಿಬಿಟಿ ಹಾಗೂ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಮೀಸಲಿಟ್ಟಿರುವ ಆಸನಗಳಲ್ಲಿ ಕೆಲವು ವ್ಯಕ್ತಿಗಳು ಸರಾಯಿ ಕುಡಿದು ಆಸನಗಳಲ್ಲಿ ನಿದ್ರೆಗೆ ಜಾರುವದು ಸಾಮಾನ್ಯವಾದೆ. ಈಗ ತಾನೇ ಇಡಿ ದೇಶ ಕೋವಿಡ್ ಮಹಾಮಾರಿಯಿಂದ ಬಿಡುಗಡೆ ಹೊಂದುತ್ತಿರುವ ಬೆನ್ನಲ್ಲೆ ಸ್ವಚ್ಛತೆಗೆ ಆದ್ಯತೆ ನೀಡುವದು ಅನಿವಾರ್ಯವಾಗಿದೆ. ಸಾರ್ವಜನಿಕ ಸೇವಾ ಸಂಘ, ಸಂಸ್ಥೆಗಳು ಸ್ವಚ್ಚತೆಗೆ ಆದ್ಯತೆ ನೀಡಿ ಸಾರ್ವಜನಿಕರಿಗೆ ಅರಿವು ಮೂಡಿಸುವದು ಅವಶ್ಯಕವಾಗಿದೆ. ಇಂತಹ ವ್ಯಕ್ತಿಗಳು ಸಾರ್ವಜನಿಕ ಸೇರುವ ಸ್ಥಳಗಳಲ್ಲಿ ಅಸಭ್ಯರೀತಿಯಲ್ಲಿ ಮಲಗಿ ಹಾಗೂ ವರ್ತಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ. ಹಾಗೇ ಬಸ್ ನಿಲ್ದಾಣ , ರೇಲ್ವೆ ನಿಲ್ದಾಣಗಳಲ್ಲಿ ಭಿಕ್ಷೆ ಬೆಡುವವರ ಸಂಖ್ಯೆಯು ಹೆಚ್ಚುತ್ತಲಿದೆ. ಸಂಬಂದಿಸಿದ ಇಲಾಖೆಯ ಅಧಿಕಾರಿಗಳು ಇತಂಹ ವ್ಯಕ್ತಿಗಳ ವಿರುದ್ಧ ಕ್ರಮಗಳನ್ನು ಜರುಗಿಸಿ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರ ಅನುಕೂಲ ಮಾಡಿಕೊಡುವುದು ಅವಶ್ಯಕವಾಗಿದೆ.