ತುಂಬಿ ಹರಿದ ಮಾಲವಿ ಜಲಾಶಯದ ಒಡಲು

ಹಗರಿಬೊಮ್ಮನಹಳ್ಳಿ.ಅ.03 ದಶಕಗಳ ಕಾಲ ಬಡವಿ ಮಾಲವಿ ಜಲಾಶಯ ನೀರಿಲ್ಲದೆ ಬರಡಾಗಿದ್ದ ಜಲಾಶಯಕ್ಕೆ ಅನಾಥ ಪ್ರಜ್ಞೆ ಕಾಡುತ್ತಿತ್ತು. ಈಗ ತನ್ನ ಒಡಲು ತುಂಬಿಕೊಂಡು ತನ್ನತ್ತ ಸೆಳೆಯುವಂತಹ ಮನಸ್ಸು ಮಾಡಿ ಪ್ರವಾಸಿಗರಲ್ಲಿ ಮಂದಹಾಸ ಮೂಡಿಸಿದೆ.
ತಾಲೂಕಿನ ರೈತರ ಜೀವನಾಡಿ ಎಂದೇ ಕರೆಯುವ ಈ ಜಲಾಶಯ ತುಂಬಿಕೊಂಡಿದ್ದ ಅಪರೂಪ 50 ವರ್ಷಗಳಲ್ಲಿ ಐದರಿಂದ ಆರು ಬಾರಿ ತುಂಬಿಕೊಂಡಿರುವುದು ಬಿಟ್ಟರೆ ವರ್ಷಗಟ್ಟಲೆ ಬರುಡಾಗಿದ್ದು ನೋಡಿದ್ದಾರೆ .ಕಾರಣ ಜಲಾಶಯದ ಮೂಲ ಹರಿವು ಹಾಗು ಮಳೆಯ ಅಭಾವದಿಂದ ಜಲಾಶಯಕ್ಕೆ ನೀರಿನ ಹರಿವಿಕೆ ಕಡಿಮೆಯಾಗಿರುವುದು ಒಂದು ಕಾರಣ ಈ ವರ್ಷ ವರುಣ ದೇವರ ಕೃಪೆ ಹಾಗೂ ತುಂಗಭದ್ರೆಯ ಶಾಶ್ವತ ನೀರು ಸೇರಿ ಜಲಾಶಯ ತುಂಬಿ ತುಳುಕುತ್ತಿರುವುದರಿಂದ 3 ಗೇಟ್ ಗಳ ಮುಖಾಂತರ ನೀರನ್ನು ಹಗರಿ ಹಳ್ಳಕ್ಕೆ ಬಿಡಲಾಗಿದೆ. ನೀರನ್ನು ಹಗರಿ ಹಳ್ಳಕ್ಕೆ ಬಿಡುವ ಬದಲು ಎಡ ಮತ್ತು ಬಲದಂಡೆ ಕಾಲುವೆಗೆ ನೀರು ಹರಿಸಿದರೆ ಸುತ್ತಮುತ್ತ ರೈತರ ಬೋರ್ವೆಲ್ ಗಳು ಅಂತರ್ಜಲ ಹೆಚ್ಚಾಗಿ ರೈತರಿಗೆ ಉಪಯೋಗವಾಗುತ್ತದೆ
ದಸರಾ ಹಬ್ಬದ ಈ ಸಂದರ್ಭದಲ್ಲಿ ಜಲಾಶಯ ಭರ್ತಿ ಯಾಗಿರುವುದು ರಜೆ ಇರುವುದರಿಂದ ಪ್ರವಾಸಿಗರ ದಂಡೇ ಮಾಲವಿ ಜಲಾಶಯಕ್ಕೆ ಹರಿದು ಬರುತ್ತದೆ.
ಈ ಭಾಗದ ಅನೇಕ ಹೋರಾಟಗಾರರು ಮಠಾಧೀಶರು, ಜನಪ್ರತಿನಿಧಿಗಳು, ರೈತ ಸಂಘಟನೆ, ಕನ್ನಡಪರ ಸಂಘಟನೆಗಳು ಶಾಶ್ವತ ನೀರಿಗಾಗಿ ಮಾಲವಿ ಜಲಾಶಯಕ್ಕಾಗಿ ನಿರಂತರ ಹೋರಾಟ ಸತ್ಯಾಗ್ರಹ ಮಾಡಿದವರ ಮನಸ್ಸು ಈಗ ಮಂದಹಾಸ ಮೂಡಿದೆ.
ಶಾಸಕ ಭೀಮಾನಾಯ್ಕ ಜಲಾಶಯಕ್ಕೆ ಶಾಶ್ವತ ನೀರು ತರುವಲ್ಲಿ ಅವರ ಶ್ರಮ ಕೂಡ ಒಂದು ಮೈಲುಗಲ್ಲು ತುಂಗಭದ್ರ ಜಲಾಶಯಕ್ಕೆ ಹರಿಯುತ್ತಿದ್ದಂತೆ ವರುಣದೇವ ಕಣ್ತೆರೆದು ನಿರಂತರ ಮಳೆಯ ಕೂಡ ಹಳ್ಳಕೊಳ್ಳಗಳ ಮೂಲಕ ಜಲಾಶಯಕ್ಕೆ ನೀರು ಹರಿದುಬಂದು ತನ್ನ ಒಡಲು ತುಂಬಿಕೊಂಡಿತ್ತು.
ಶಾಸಕರ ಭೀಮಾನಾಯ್ಕ್ ಮತ್ತು ಅವರ ಪತ್ನಿ ಗೀತಾ ಭೀಮಾ ನಾಯ್ಕ್ ತುಂಬಿ ಹರಿದ ಮಾಲವಿ ಜಲಾಶಯಕ್ಕೆ ಪೂಜೆ ಸಲ್ಲಿಸುವ ಮೂಲಕ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಮಠಾಧೀಶರಾದ ನಂದಿ ಪುರದ ಮಹೇಶ್ವರ ಸ್ವಾಮೀಜಿ, ಹಿರೇಹಡಗಲಿ ಹಾಲ ವೀರಪ್ಪಜ್ಜ ಸ್ವಾಮೀಜಿ, ಹಾಲಸ್ವಾಮಿ ಮಠ ಸಿದ್ದೇಶ್ವರ ಸ್ವಾಮೀಜಿ, ಕೊಟ್ಟೂರಿನ ಚಾನ ಕೋಟೆ ಮಠದ ಸ್ವಾಮೀಜಿ, ಮಾಜಿ ಜಿ ಪಂ ಸದಸ್ಯರಾದ ಅಕ್ಕಿ ತೋಟೇಶ್, ಹರ್ಷವರ್ಧನ, ಹೆಗ್ಡೆಳ್ ರಾಮಣ್ಣ ಪುರಸಭೆ ಸದಸ್ಯರಾದ ಪವಾಡಿ ಹನುಮಂತಪ್ಪ, ಮರಿ ರಾಮಪ್ಪ, ಗಣೇಶ,ಮುಖಂಡರಾದ ಡಿಶ್ ಮಂಜುನಾಥ್ ಹಾಲ್ದಾಳ್ ವಿಜಯಕುಮಾರ್,ಮೈಲಾರಪ್ಪ, ಮುಟ್ಟನಹಳ್ಳಿ ಕೊಟ್ರೇಶ್ ಚನ್ನಬಸಪ್ಪ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಹಿರಾಬಾನು, ಇತರರಿದ್ದರು.