ಕಂಬಳಿ ಹಾಕಿದವರೇಲ್ಲಾ ಕುರಬರಲ್ಲಾ, ಟೋಪಿ ಹಾಕಿದವರು ಯಾವ ಜಾತಿಗೆ ಹುಟ್ಟಿದ್ದಾರೆ. ಸಿಟಿ ರವಿ

ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಟೀಕಿಸಲು ಹೋಗಿ ವಿವಾದಾತ್ಮಕ Facebook ನಲ್ಲಿ ಪೋಸ್ಟ್ ಮಾಡುವ ಮೂಲಕ ಬಿಜೆಪಿ ಶಾಸಕ ಸಿಟಿ ರವಿ ಕುರುಬ ಸಮುದಾಯಕ್ಕೆ ಮತ್ತು ಕಾಂಗ್ರೆಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೌದು ಇತ್ತೀಚಿನ ದಿನಗಳಲ್ಲಿ ಬೈ ಇಲೆಕ್ಷನ್ ಪ್ರಚಾರದ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಒಂದು ಕಾರ್ಯಕ್ರಮದಲ್ಲಿ ಕಂಬಳಿ ಹಾಕಿದ್ದರು. ಈ ವಿಚಾರವಾಗಿ ಕಂಬಳಿ ಹಾಕಿ ಮಾತನಾಡುವುದಕ್ಕೂ ಯೋಗ್ಯತೆ ಬೇಕು ಎಂದು ಮಾಜಿ ಸಿಎಂ ಸಿದ್ದು ಹಾಲಿ ಸಿಎಂ ಬೊಮ್ಮಯಿ ಅವರಿಗೆ ಟಾಂಗ್ ನೀಡಿದ್ರು. ಈ ವಿಚಾರ ಇಟ್ಟುಕೊಂಡು ಬಿಜೆಪಿ ಮುಖಂಡ ಸಿಟಿ ರವಿ ಅವರು ಕಂಬಳಿ ಹಾಕುದಕ್ಕೆ ಕುರುಬರ ಜಾತಿವರೇ ಆಗಬೇಕಾ, ಮುಸ್ಲಿಂ ಸಮುದಾಯ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಟೋಪಿ ಹಾಕಿದ್ದಾರೆ, ಹಾಗದ್ರೆ ಸಿದ್ದರಾಮಯ್ಯ ಯಾರಿಗೆ ಹುಟ್ಟಿರಬೇಕು ಎಂದು ಸಿಟಿ ರವಿ Facebook ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.ಇದ್ರಿಂದ ಸಿಟಿ ರವಿ ಕುರುಬ ಸಮುದಾಯಕ್ಕೆ ಗುರಿಯಾಗಿದ್ದಾರೆ. ಈ ವಿಚಾರವಾಗಿ ಸವದತ್ತಿ ಕುರುಬ ಸಮುದಾಯ ಮತ್ತು ಕೈ ಮುಖಂಡರು ಸವದತ್ತಿ ತಹಶಿಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದ್ದಾರೆ.