ನಿವೇಶನರಹಿತರನ್ನು ಸರ್ವೇ ಮೂಲಕ ಗುರುತಿಸುವಂತೆ ಒತ್ತಾಯಿಸಿ ಪ್ರತಿಭಟನೆ

ನಿವೇಶನರಹಿತರನ್ನು ಸರ್ವೇ ಮೂಲಕ ಗುರುತಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಹುಬ್ಬಳ್ಳಿ : ಅವರೆಲ್ಲ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರದ ಜನ್ರು .ಸುಮಾರು ವರ್ಷಗಳಿಂದ ಸ್ವಂತ ನಿವೇಶನಕ್ಕಾಗಿ ಹೋರಾಟ ಮಾಡ್ತಾನೇ ಬಂದವರು.ಭರವಸೆ ಮಾತುಗಳನ್ನು ನಂಬಿ ದಿನಗಳನ್ನು ದೂಡ್ತಾನೇ ಬಂದವರು. ಆದ್ರೆ ಇವತ್ತು ಅವರ ತಾಳ್ಮೆ ಕಟ್ಟೆ ಒಡೆದಿತ್ತು. ಪರಿಣಾಮ ಪ್ರತಿಭಟನೆ ಹಾದಿ ತುಳಿದ್ರು.

ಹೀಗೆ ಪಾಲಿಕೆ ವಿರುದ್ಧ ಘೋಷಣೆ ಕೂಗಿ ಕೈಯಲ್ಲಿ ವಿವಿಧ ರೀತಿಯ ಫಲಕಗಳನ್ನ ಹಿಡಿದು ಪ್ರತಿಭಟನೆ ಮಾಡುತ್ತಿರುವ ದೃಶ್ಯಾವಳಿಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣ. ಹೌದು,ಕಳೆದ ಹಲವಾರು ವರ್ಷಗಳಿಂದ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಆರ್ಥಿಕವಾಗಿ ಹಿಂದೂಳಿದ ದುರ್ಬಲ ವರ್ಗದ ನಿವೇಶನ ರಹಿತರನ್ನು ಸರ್ವೇ ಮೂಲಕ ಗುರುತಿಸಲು ಕೆಲಸ ಆಗಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ನಿವೇಶನ ರಹಿತರ ಹೋರಾಟ ಸಮಿತಿಯವರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.

ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಮುಂದೆ ಜಮಾವಣೆಗೊಂಡ ನೂರಾರು ಸಂಖ್ಯೆಯ ಜನರು, ಹುಬ್ಬಳ್ಳಿ ಧಾರವಾಡದಲ್ಲಿ ಸುಮಾರು ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರನ್ನು ಸರ್ವೆ ಮುಖಾಂತರ ಗುರುತಿಸಲು ಕೆಲಸ ಆಗಿಲ್ಲ. ಈ ಕಾರಣದಿಂದ ನಿವೇಶನ ರಹಿತರ ಹೋರಾಟ ಸಮಿತಿಯಿಂದ ಹಲವಾರು ಬಾರಿ ಮನವಿ ಸಲ್ಲಿಸಿ ಸರ್ವೇ ಕಾರ್ಯ ಆರಂಭಿಸಿ ಎಂದು ತಿಳಿಸಲಾಗಿದೆ. ಆದಾಗ್ಯೂ ಈವರೆಗೆ ಆರ್ಥಿಕವಾಗಿ ಹಿಂದೂಳಿದ ನಿವೇಶನ ರಹಿತರನ್ನು ಸರ್ವೇ ಮುಖಾಂತರ ಗುರುತಿಸಲು ಕೆಲಸ ಆಗಿಲ್ಲ. ಕೂಡಲೇ ಆಯುಕ್ತರು ಸರ್ವೇ ಕಾರ್ಯ ನಡೆಸಿ ನಿವೇಶನ ರಹಿತರಿಗೆ ಪರಿಚಯ ಪತ್ರ ಅಥವಾ ಗುರುತಿನ ಕಾರ್ಡ್ ನೀಡಬೇಕೆಂದು ಆಗ್ರಹಿಸಿದರು. 

ಇನ್ನು ಪಾಲಿಕೆ ಸರ್ವೇ ಕಾರ್ಯವನ್ನು ಒಂದು ತಿಂಗಳ ಒಳಗಾಗಿ ಮಹಾನಗರ ಪಾಲಿಕೆ ಸರ್ವೇ ಕಾರ್ಯ ಆರಂಭಿಸದಿದ್ದರೆ, ಮುಂದಿನ ದಿನಗಳಲ್ಲಿ ಜನರೇ ತಾವು ವಾಸಿಸುವ ಕುರಿತು ತಾವೇ ಪತ್ರವನ್ನು ತಂದು ಕೊಡ್ತಾರೆ.  ಅಧಿಕಾರಿಗಳು ಅದೇ ಪತ್ರವನ್ನು ಪರಿಗಣಿಸಿ ನಿವೇಶನ ರಹಿತರು ಎಂದು ಪರಿಗಣಿಸಿ ಗುರುತಿನ ಪತ್ರ ನೀಡಬೇಕು ಎಂದು ಒತ್ತಾಯಿಸಿ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.