ಸಚಿವ ಸ್ಥಾನಕ್ಕಾಗಿ ನಾನು ಪ್ರಯತ್ನ ನಡೆಸಿದ್ದೇನೆ ಅರವಿಂದ ಬೆಲ್ಲದ
ಹುಬ್ಬಳ್ಳಿ : ನನಗೂ ಕೂಡಾ ಸಚಿವನಾಗಬೇಕೆಂಬ ಆಸೆ ಇದೆ. ಕೇವಲ ನನಗಷ್ಟೇ ಅಲ್ಲ. ಶಾಸಕರಾದವರಿಗೆ ಸಚಿವನಾಗಬೇಕೆಂಬ ಆಸೆ ಇದ್ದೇ ಇರುತ್ತದೆ. ರಾಜಕೀಯ ಅಂದರೆ ದೆಹಲಿ ಮಟ್ಟದಲ್ಲಿ ಲಾಭಿ ಇದ್ದೆ ಇರುತ್ತದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿಕೆಯೊಂದನ್ನು ನೀಡಿದ್ದಾರೆ
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹೈಕಮಾಂಡ್ ಅವರದ್ದೇ ಲೆಕ್ಕಾಚಾರದ ಮೇಲೆ ಸಚಿವ ಸ್ಥಾನವನ್ನು ನೀಡುತ್ತಾರೆ. ಈಗಾಗಲೇ ಉತ್ತರ ಭಾರತದ ಎಲ್ಲ ಚುನಾವಣೆ ಮುಗಿದಿದೆ. ಹೈಕಮಾಂಡ್ ಗಮನ ದಕ್ಷಿಣ ಭಾರತದ ಮೇಲೆ ಇದೆ. ಈಗ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದರು.
ಇನ್ನು ಮೂರು ಜನರನ್ನು ಡಿಸಿಎಂ ಸೃಷ್ಟಿ ವಿಚಾರವಾಗಿ ಮಾತನಾಡಿದ ಅವರು, ಅದು ಮಾಧ್ಯಮದ ಸೃಷ್ಟಿ. ಹೈಕಮಾಂಡ್ ಏನೂ ಮಾಡುತ್ತಾರೆ ಅವರಿಗೆ ಗೊತ್ತು. ಅವರ ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ. ಸಚಿವ ಸಂಪುಟದಲ್ಲಿ ಹಿರಿಯರು ಇರಬೇಕು. ಯುವಕರು ಇರಬೇಕು. ಯುವಕರಿಗೆ ಮತ್ತು ಹೊಸ ಮುಖಗಳಿದ್ದರೇ ಚೆನ್ನಾಗಿರುತ್ತದೆ. ನನಗೂ ಕೂಡಾ ಪಾಸಿಟಿವ್ ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ. ಹಾಗಾಗಿ ಎಲ್ಲವೂ ಹೈಕಮಾಂಡ್ ಗೆ ಬಿಟ್ಟ ವಿಚಾರ. ನಾನು ಸಚಿವ ಸ್ಥಾನಕ್ಕಾಗಿ ದೆಹಲಿ ಭೇಟಿ ನೀಡಿಲ್ಲ. ಅನ್ಯ ಕಾರ್ಯದ ನಿಮಿತ್ತವಾಗಿ ದೆಹಲಿಗೆ ಭೇಟಿ ನೀಡಿದೆ. ಎಲ್ಲರೂ ಸಚಿವ ಸ್ಥಾನಕ್ಕಾಗಿ ಲಾಭಿ ಮಾಡುವುದು ಸಹಜ, ನಾನೂ ಸಹ ಪ್ರಯತ್ನ ನಡೆಸಿದ್ದೇನೆ. ಸಚಿವ ಸಂಪುಟದಲ್ಲಿ ಕೇವಲ ಹಿರಿಯರು ಇದ್ದರೂ ನಡೆಯುವುದಿಲ್ಲ. ಯುವಕರು ಇದ್ದರು ನಡೆಯುವುದಿಲ್ಲ ಇಲ್ಲಿ ಕಾಂಬಿನೇಷನದ ಅತಿಅವಶ್ಯ ಎಂದರು.
ಮಸೀದಿ ಮೇಲಿನ ಮೈಕ್ ಬಂದ್ ಮಾಡಬೇಕೆಂಬ ವಿಷಯವಾಗಿ ಮಾತನಾಡಿದ ಅವರು, ಶಬ್ದ ಮಾಲಿನ್ಯ ಇರೋದೆ ಮಸೀದಿಗಳ ಮೇಲಿನ ಮೈಕ್ ಗಳಿಂದ, ಹಾಗಾಗಿ ಮಸೀದಿಗಳ ಮೇಲಿನ ಮೈಕ್ ಬಂದ್ ಮಾಡಿದರೇ, ತಾನಾಗಿಯೇ ದೇವಸ್ಥಾನಗಳ ಮೇಲಿನ ಮೈಕ್ ಗಳು ಬಂದ್ ಆಗುತ್ತವೆ ಎಂದರು.