ಶಿಶುವಿನಹಾಳ ಶರೀಫರ ಹಾಗೂ ಗೋವಿಂದಭಟ್ಟರ ಗದ್ದುಗೆ ದರ್ಶನ ಪಡೆದ ಸಿ.ಸಿ ಪಾಟೀಲ
ಶಿಗ್ಗಾವಿ : ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಶಿಶುವಿನಾಳ ಗ್ರಾಮಕ್ಕೆ ಲೋಕೊಪಯೋಗಿ ಸಚಿವ ಸಿ.ಸಿ.ಪಾಟೀಲ ಬುಧವಾರ ಭೇಟಿ ನೀಡಿ, ಶರೀಫ ಶಿವಯೋಗಿಗಳ ಹಾಗೂ ಗೋವಿಂದ ಭಟ್ಟರ ಗದ್ದುಗೆಗಳ ದರ್ಶನವನ್ನು ಪಡೆದುಕೊಂಡರು
ಈ ಸಂದರ್ಭದಲ್ಲಿ ತಾಲೂಕಿನ ಲಿಂಗಾಯಿತ ಪಂಚಮಸಾಲಿ ಅಧ್ಯಕ್ಷ ಶಿವಾನಂದ ಬಾಗೂರ, ಅವರ ನೇತೃತ್ವದಲ್ಲಿ ಸಮಾಜದ ಬಾಂಧವರು ಸೇರಿ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪಾಲಾಕ್ಷಪ್ಪ ಹಾವಣಗಿ, ನಿಂಗಜ್ಜ ಅತ್ತಿಗೇರಿ, ಬಸವನಗೌಡ ಪಾಟೀಲ, ರುದ್ರಪ್ಪ ಬೇಟಗೇರಿ, ಮುತ್ತುಗೌಡ ಪಾಟೀಲ, ಚಂದ್ರ ಕೊತಂಬರಿ, ಜಿ.ಸಿ.ಪಾಟೀಲ, ಶೇಕಪ್ಪ ಅತ್ತಿಗೇರಿ, ಆರ್.ಸಿ. ಕಮ್ಮಾರ, ಶಿವಾನಂದ ಕುನ್ನೂರ, ಮುದಕಪ್ಪ ವನಹಳ್ಳಿ, ಹಲವರು ಮುಖಂಡರು ಉಪಸ್ಥಿತರಿದ್ದರು.