ಮಂಗಳೂರು: ಗೋವಾ ಸಿಎಂ ಪ್ರವಾಸದಲ್ಲಿ ಭದ್ರತಾ ವೈಫಲ್ಯ ಆಗಿಲ್ಲ

ಮಂಗಳೂರು: ಗೋವಾ ಸಿಎಂ ಪ್ರವಾಸದಲ್ಲಿ ಭದ್ರತಾ ವೈಫಲ್ಯ ಆಗಿಲ್ಲ

ಮಂಗಳೂರು: ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮಂಗಳೂರು ಪ್ರವಾಸದ ವೇಳೆ ಭದ್ರತಾ ವೈಫಲ್ಯ ಉಂಟಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಝೀರೋ ಟ್ರಾಫಿಕ್‌ ವೇಳೆ ಬೈಕ್‌ನಲ್ಲಿ ನಂತೂರು ಜಂಕ್ಷನ್‌ನಲ್ಲಿ ಮೂವರು ಯುವಕರು ನುಗ್ಗಿದ್ದರು.

ಆದರೆ ಘಟನೆ ನಡೆಯುವಾಗ ಗೋವಾ ಸಿಎಂ ಅವರ ವಾಹನ ಪಂಪ್‌ವೆಲ್‌ ಬಳಿ ಇತ್ತು. ಬೈಕ್‌ಗಾಗಿ ಸಂಚಾರ ಪೊಲೀಸರು ಶೋಧ ನಡೆಸುತ್ತಿದ್ದು, ಸಿಸಿ ಕೆಮರಾದಲ್ಲಿ ದೃಶ್ಯಾವಳಿ ಸಿಕ್ಕಿದೆ, ಪರಿಶೀಲಿಸಿದಾಗ ಆ ಬೈಕ್‌ಗೆ ನಂಬರ್‌ ಪ್ಲೇಟ್‌ ಇಲ್ಲ ಎಂದು ತಿಳಿದು ಬಂದಿದೆ.