ಹೊಸದಿಲ್ಲಿಯ ಹೊಟೇಲ್‌ಗೆ ಲಕ್ಷಾಂತರ ರೂಪಾಯಿ ವಂಚನೆ: ದರ್ಬೆ ನಿವಾಸಿ ಮೊಹಮ್ಮದ್ ಶರೀಫ್ ಸೆರೆ
ಮಂಗಳೂರು: ಯುನೈಟೆಡ್ ಅರಬ್ ಎಮಿರೇಟ್ಸ್ ರಾಜನ ಕುಟುಂಬ ಸದಸ್ಯನ ಸೋಗಿನಲ್ಲಿ ಹೊಸದಿಲ್ಲಿಯ ಹೊಟೇಲ್‌ನಲ್ಲಿ ಉಳಿದುಕೊಂಡು ಲಕ್ಷಾಂತರ ರೂಪಾಯಿ ಬಿಲ್ ಪಾವತಿಸದೆ ವಂಚಿಸಿದ ಆರೋಪದಲ್ಲಿ ಹೊಸದಿಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟ ವ್ಯಕ್ತಿಯನ್ನು ಪುತ್ತೂರಿನ ದರ್ಬೆ ನಿವಾಸಿ ಮೊಹಮ್ಮದ್ ಶರೀಫ್ (41) ಎಂದು ಗುರುತಿಸಲಾಗಿದೆ.ಈತನನ್ನು ಪೊಲೀಸರು ಜ. 19ರಂದು ಪುತ್ತೂರಿನಿಂದ ಬಂಧಿಸಿ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಸ್ಥಳೀಯವಾಗಿ ಈ ಬಗ್ಗೆ ಯಾವುದೇ ಮಾಹಿತಿಯನ್ನು ಪೊಲೀಸರು ದೃಢಪಡಿಸಿಲ್ಲ.