ಹರಾಜಿನ ಬಳಿಕ ಬಲಿಷ್ಠವಾಗಿ ಕಾಣಿಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಯಾರೆಲ್ಲಾ ಇದ್ದಾರೆ?

ವುಮೆನ್ಸ್ ಪ್ರೀಮಿಯರ್ ಲೀಗ್‌ನ ಪ್ರಪ್ರಥಮ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಅದ್ಭುತ ತಂಡವನ್ನು ಸಿದ್ಧಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಭಾರತ ತಂಡದ ಹಲವು ಪ್ರಮುಖ ಆಟಗಾರ್ತಿಯರನ್ನು ತಂಡಕ್ಕೆ ಸೇರ್ಪಡೆಗೊಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಬಲಿಷ್ಠವಾಗಿಯೇ ಗೋಚರಿಸುತ್ತಿದೆ.
ಯಾರಿಗೆ ನಾಯಕತ್ವ?: ಡೆಲ್ಲಿ ಕ್ಯಾಪಿಟಲ್ಸ ತಂಡದ ನಾಯಕತ್ವ ಯಾರಿಗೆ ದೊರೆಯಲಿದೆ ಎಂಬುದು ಸದ್ಯಕ್ಕೆ ಸಾಕಷ್ಟು ಕುತೂಹಲ ಮೂಡಿಸಿದೆ. ಸದ್ಯಕ್ಕೆ ಆಸ್ಟ್ರೇಲಿಯಾದ ಮೆಗ್ ಲ್ಯಾನ್ನಿಂಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕಿಯಾಗಿ ಮೊದಲ ಆಯ್ಕೆಯಾಗಿ ಗೋಚರಿಸುತ್ತಿದ್ದಾರೆ. ಭಾರತೀಯರನ್ನು ಆಯ್ಕೆ ಮಾಡುವ ನಿರ್ಧಾರಕ್ಕೆ ಡಿಸಿ ಬಂದಲ್ಲಿ ಜಮಿಮಾ ರೋಡ್ರಿಗಸ್ ಹಾಗೂ ಶಫಾಲಿ ವರ್ಮ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡೆಲ್ಲಿ ಫ್ರಾಂಚೈಸಿ ಐಪಿಎಲ್‌ನಲ್ಲಿಯೂ ಅನುಭವಿ ಆಟಗಾರರ ಮಧ್ಯೆಯೂ ಪಂತ್‌ಗೆ ಅವಕಾಶ ನೀಡಿರುವ ಇತಿಹಾಸವಿದೆ. ಹೀಗಾಗಿ ದೀರ್ಘ ಕಾಲದ ದೃಷ್ಟಿಯಿಂದ ಶಫಾಲಿಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ.
ಜಮಿಮಾ ದುಬಾರಿ ಆಟಗಾರ್ತಿ: ಭಾರತ ತಂಡದ ಮಧ್ಯಮ ಕ್ರಮಾಂಕದ ಆಟಗಾರ್ತಿ ಜಮಿಮಾ ರೋಡ್ರಿಗಸ್ ಡೆಲ್ಲಿ ಕ್ಯಾಪಿಟಲ್ಸ ತಂಡದ ದುಬಾರಿ ಆಟಗಾರ್ತಿಯಾಗಿದ್ದಾರೆ. 2.2 ಕೋಟಿ ಮೊತ್ತಕ್ಕೆ ಜಮಿಮಾ ಡೆಲ್ಲಿ ಪಾಲಾಗಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಶಫಾಲಿ ವರ್ಮಾ ಇದ್ದು 2 ಕೋಟಿ ಮೊತ್ತಕ್ಕೆ ಹರಾಜಾಗಿದ್ದಾರೆ. ಮರಿಜಾನ್ನೆ ಕಾಪ್ 1.5 ಕೋಟಿ ಮೊತ್ತಕ್ಕೆ ಹರಾಜಾದರೆ ಮೆಗ್ ಲ್ಯಾನ್ನಿಂಗ್ 1.1ಕೋಟಿ ಮೊತ್ತವನ್ನು ಪಡೆದುಕೊಂಡಿದ್ದಾರೆ.
ಜಮಿಮಾ ರೋಡ್ರಿಗಸ್ (2.2 ಕೋಟಿ ರೂ), ಮೆಗ್ ಲ್ಯಾನಿಂಗ್ (1.1 ಕೋಟಿ ರೂ), ಶಫಾಲಿ ವರ್ಮಾ (2 ಕೋಟಿ ರೂ), ರಾಧಾ ಯಾದವ್ (40 ಲಕ್ಷ ರೂ), ಶಿಖಾ ಪಾಂಡೆ (60 ಲಕ್ಷ ರೂ), ಮರಿಜಾನ್ನೆ ಕಪ್ (1.5 ಕೋಟಿ ರೂ), ತಿತಾಸ್ ಸಧು (25 ಲಕ್ಷ ರೂ), ಆಲಿಸ್ ಕ್ಯಾಪ್ಸೆ (75 ಲಕ್ಷ ರೂ), ತಾರಾ ನಾರಿಸ್ (10 ಲಕ್ಷ ರೂ), ಲಾರಾ ಹ್ಯಾರಿಸ್ (45 ಲಕ್ಷ ರೂ), ಜಸಿಯಾ ಅಖ್ತರ್ (20 ಲಕ್ಷ ರೂ), ಮಿನ್ನು ಮಣಿ (30 ಲಕ್ಷ ರೂ) ಜೆಸ್ ಜೋನಾಸೆನ್ (50 ಲಕ್ಷ ರೂ), ತನಿಯಾ ಭಾಟಿಯಾ (30 ಲಕ್ಷ ರೂ), ಪೂನಮ್ ಯಾದವ್ (30 ಲಕ್ಷ ರೂ), ಸ್ನೇಹಾ ದೀಪ್ತಿ (30 ಲಕ್ಷ ರೂ), ಅರುಂಧತಿ ರೆಡ್ಡಿ (30 ಲಕ್ಷ), ಅಪರ್ಣಾ ಮೊಂಡಲ್ (10 ಲಕ್ಷ ರೂ)