ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಮರಿಂದ ಅನ್ನಪ್ರಸಾದ ವ್ಯವಸ್ಥೆ

ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಮರಿಂದ ಅನ್ನಪ್ರಸಾದ ವ್ಯವಸ್ಥೆ

ರಾಮದುರ್ಗ: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಮರಿಂದ ಅನ್ನಪ್ರಸಾದ ವ್ಯವಸ್ಥೆ ಮಾಡಿ, ಭಾವೈಕ್ಯತೆ ಮೆರೆಯಲಾಗಿದೆ.

ರಾಮದುರ್ಗ ಪಟ್ಟಣದ ಹೊರವಲಯದ ಹಲಗತ್ತಿ ಬಾಯಪಾಸ್ ರಸ್ತೆ ಬದಿಯಲ್ಲಿದ್ದ ತೋಟದಲ್ಲಿ ರಾಮದುರ್ಗ ಜಮೇತೆ ಉಲ್ಮಾ ಸಂಘಟನೆ ಮುಸ್ಲಿಂ ಸಮುದಾಯದವರುಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದಾರೆ.

ಈ ವೇಳೆ ಜಮಿಯಾತ ಏ ಉಲ್ಮಾ ರಾಮದುರ್ಗ ಕಾರ್ಯದರ್ಶಿ ಮುಫ್ತಿ ಹುಸೇನ್ ಪಟೇಲ ಅವರು ಮಾತನಾಡಿ, ಇಡೀ ಜಗತ್ತಿನ ನಮ್ಮ ನಿಮ್ಮಲಾರ ಜಗದ ಒಡೆಯಾ ಒಬ್ಬನೇ. ಆದರೆ ನಾಮ ಹಲವು ನಮ್ಮಲ್ಲಿ ಉಡುಪು ಆಹಾರ ಸೇವನೆ ಬೇರೆ ಇರಬಹುದು. ಈ ಜಗತ್ತಿನಲ್ಲಿ ಎರಡು ಜಾತಿಗಳು ಇದ್ದಾವೆ ಅದು ಒಂದು ಹೆಣ್ಣು ಒಂದು ಗಂಡು. ಇದರಲ್ಲಿ ಪಂಗಡಗಳು ಬೇರೆ ಬೇರೆ ಇದ್ದಾವೆ. ಸೃಷ್ಟಿಕರ್ತನಲ್ಲಿ ಆತ್ಮಿಯವಾಗಿ ಯಾರು ಇರುತ್ತಾನೆ ಅಂದರೆ ಅವನ ತೋರಿದ ಮಾರ್ಗದಲ್ಲಿ ಸೃಷ್ಟಿಕರ್ತನ ಆರಾಧನೆ ಮಾಡುವನೇ ಪ್ರೀತಿಗೆ ಪಾತ್ರರಾಗುತ್ತಾರೆ ಎಂದು ಹೇಳಿದರು.