19 ಲಕ್ಷ ರೂ. ಮೌಲ್ಯದ ಮೊಬೈಲ್ ಟವರ್ ಕಳವು!

19 ಲಕ್ಷ ರೂ. ಮೌಲ್ಯದ ಮೊಬೈಲ್ ಟವರ್ ಕಳವು!

ಪಾಟ್ನಾದಲ್ಲಿ ಮೊಬೈಲ್ ಕಂಪೆನಿ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ಜನರ ಗುಂಪೊಂದು, 19 ಲಕ್ಷ ರೂ ಮೌಲ್ಯದ ಮೊಬೈಲ್ ಟವರ್ ಕತ್ತರಿಸಿ ಕದ್ದೊಯ್ದಿದೆ. ಪಟನಾದ ಗಾರ್ಡನಿಬಾಗ್ ಪ್ರದೇಶದ ಯಾರ್ಪುರ್ ರಾಜಪುಟನಾ ಕಾಲೋನಿಯಲ್ಲಿರುವ ಲಲನ್ ಸಿಂಗ್ ಎಂಬುವವರ ಭೂಮಿಯಲ್ಲಿ ಗುಜರಾತ್ ಟೆಲಿ ಲಿಂಕ್ ಪ್ರೈ ಲಿಮಿಟೆಡ್ ಕಂಪೆನಿ ಟವರ್ ಸ್ಥಾಪಿಸಿತ್ತು. ಮೊಬೈಲ್ ಕಂಪೆನಿಯ ಅಧಿಕಾರಿಗಳ ಸೋಗಿನಲ್ಲಿ ಬಂದ ಗುಂಪು, ಕಂಪೆನಿ ನಷ್ಟ ಅನುಭವಿಸುತ್ತಿದ್ದು, ಟವರ್ ತೆರವಿಗೊಳಿಸಲು ಉದ್ದೇಶಿಸಿರುವುದಾಗಿ ಹೇಳಿದ್ದರು.