ಕಲ್ಲು ತೂರಾಟ: ಭಾರತದ ೬೦ ಮೀನುಗಾರಿಕಾ ದೋಣಿಗಳಿಗೆ ಹಾನಿ

ಕಲ್ಲು ತೂರಾಟ: ಭಾರತದ ೬೦ ಮೀನುಗಾರಿಕಾ ದೋಣಿಗಳಿಗೆ ಹಾನಿ

ಕಲ್ಲು ತೂರಾಟ: ಭಾರತದ ೬೦ ಮೀನುಗಾರಿಕಾ ದೋಣಿಗಳಿಗೆ ಹಾನಿ

ರಾಮೇಶ್ವರ: ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ ಶನಿವಾರ ತಡರಾತ್ರಿ ನಡೆಸಿದ ಕಲ್ಲು ತೂರಾಟದಿಂದ ಭಾರತೀಯ ಮೀನುಗಾರಿಕೆಯ ಸುಮಾರು ೬೦ ದೋಣಿಗಳು ಹಾನಿಗೀಡಾಗಿವೆ.

ಕಚ್ಚತೀವು ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದ ೨೫ ದೋಣೆಗಳಲ್ಲಿನ ಮೀನುಗಾರಿಕಾ ಬಲೆಗಳನ್ನೂ ಲಂಕಾದ ನೌಕಾ ಸಿಬ್ಬಂದಿ ಹಾಳು ಮಾಡಿದ್ದಾರೆ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಸುಮಾರು ಐದು ಹಡಗುಗಳಲ್ಲಿ ಬಂದ ಶ್ರೀಲಂಕಾದ ನೌಕಾ ಸಿಬ್ಬಂದಿ ಭಾರತೀಯ ದೋಣಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆದರೆ ಈ ದಾಳಿಯಲ್ಲಿ ಯಾವುದೇ ಮೀನುಗಾರರಿಗೂ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಶನಿವಾರ ರಾತ್ರಿ ಸುಮಾರು ೫೫೬ ದೋಣಿಗಳೊಂದಿಗೆ ಮೀನುಗಾರರು ಸಮುದ್ರಕ್ಕೆ ಇಳಿದಿದ್ದರು. ಅವುಗಳಲ್ಲಿ ಕೆಲವು ಶ್ರೀಲಂಕಾ ನೌಕಾ ಪಡೆಯ ದಾಳಿಗೆ ಗುರಿಯಾಗಿವೆ ಎಂದು ಮೀನುಗಾರರ ಸಂಘದ ಪ್ರತಿನಿಧಿ ಎಸ್. ಎಮೆರಿಟ್ ಮಾಹಿತಿ ನೀಡಿದ್ದಾರೆ.