ಬಳ್ಳಾರಿಯಲ್ಲಿ ಲಂಚ ಪಡೆಯತ್ತಿದ್ದ ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು 'CBI' ಬಲೆಗೆ

ಬಳ್ಳಾರಿಯಲ್ಲಿ ಲಂಚ ಪಡೆಯತ್ತಿದ್ದ ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು 'CBI' ಬಲೆಗೆ

ಳ್ಳಾರಿ : ಲಂಚ ಸ್ವೀಕರಿಸುತ್ತಿದ್ದ ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ ಬಿದ್ದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಯೋಗೇಶ್, ಮಹಮದ್ ಗೌಸ್, ಹಾಗೂ ಪ್ರಶಾಂತ್ ರೆಡ್ಡಿ ಎಂಬುವವರು ಬಲೆಗೆ ಬಿದ್ದಿದ್ದಾರೆ.

ಮನೆ ಕಟ್ಟಲು ಪುರಾತತ್ವ ಇಲಾಖೆಯಿಂದ NOC ನೀಡಲು ಹಣ ಬೇಡಿಕೆ ಇಟ್ಟಿದ್ದ ಬಗ್ಗೆ ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಅವರು ಸಿಬಿಐಗೆ ದೂರು ನೀಡಿದ್ದರು . ಅಂತೆಯೇ ಯೋಗೇಶ್, ಮಹಮದ್ ಗೌಸ್, ಹಾಗೂ ಪ್ರಶಾಂತ್ ರೆಡ್ಡಿ ಎಂಬುವವರು ಖಾಸಗಿ ಹೋಟೆಲ್ ನಲ್ಲಿ ಮುಂಗಡ 50 ಸಾವಿರ ರೂಪಾಯಿ ಹಣ ಪಡೆಯಲು ಬಂದಾಗ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಸದ್ಯ, ಮೂವರನ್ನು ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.