ಸ್ಯಾಂಟ್ರೋ, ಹುಂಡೈ ಯಾವ್ಯಾವ ಬ್ರ್ಯಾಂಡ್‌ಗಳು ಎಲ್ಲೆಲ್ಲಿವೆಯೋ ನನಗೆ ಗೊತ್ತಿಲ್ಲ; ಅಶ್ವಥ್‌ ನಾರಾಯಣ್

ಸ್ಯಾಂಟ್ರೋ, ಹುಂಡೈ ಯಾವ್ಯಾವ ಬ್ರ್ಯಾಂಡ್‌ಗಳು ಎಲ್ಲೆಲ್ಲಿವೆಯೋ ನನಗೆ ಗೊತ್ತಿಲ್ಲ; ಅಶ್ವಥ್‌ ನಾರಾಯಣ್

ಚಿಕ್ಕಬಳ್ಳಾಪುರ: ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಅಶ್ವಥ್‌ ನಾರಾಯಣ್‌ ಪ್ರತಿಕ್ರಿಯೆ ನೀಡಿದ್ದಾರೆ. ಸ್ಯಾಂಟ್ರೋ, ಹುಂಡೈ ಯಾವ್ಯಾವ ಬ್ರ್ಯಾಂಡ್‌ಗಳು ಎಲ್ಲೆಲ್ಲಿವೆಯೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.‌

ನಗರದಲ್ಲಿ ಮಾತನಾಡಿದ ಅವರು, ಸ್ಯಾಂಟ್ರೋ, ಹುಂಡೈನಂತಹ ಬ್ರ್ಯಾಂಡ್‌ಗಳು ಎಲ್ಲೆಲ್ಲಿವೆಯೋ ನನಗೆ ಗೊತ್ತಿಲ್ಲ. ಆದರೆ ಇಂತಹ ಬ್ರ್ಯಾಂಡ್‌ ಇದ್ದರೂ ಕ್ಲೀನ್ ಮಾಡಲು ನಾವು ಸಿದ್ಧರಿದ್ದೇವೆ. ಆದರೆ ಇಂತಹ ಬ್ರ್ಯಾಂಡ್‌ ಗಳನ್ನು ಎಲ್ಲಿಗೆ ಕಳಿಸಬೇಕೋ ಅಲ್ಲಿಗೆ ಕಳುಹಿಸುತ್ತೇವೆ. ಯಾವ ಬ್ರ್ಯಾಂಡ್‌ಗಳಿಗೂ ಕಿಂಚಿತ್ತೂ ಗೌರವ ಅಲ್ಲ. ಸಮಾಜದಲ್ಲಿ ದುರುಪಯೋಗ ಪಡಿಸಿಕೊಳ್ಳುವವನನ್ನು ಕ್ಷಮಿಸಬಾರದು ಎಂದು ಹೇಳಿದ್ದಾರೆ.
ಹೆಚ್‌ ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಹೆಚ್‌ಡಿಕೆ ಯಾರ‍್ಯಾರ ಜೊತೆ ಇದ್ರು ನಾವ್ ನೋಡಿಲ್ವಾ? ಹಾಗಂತ ನಾವ್ ಅವರ ಜೊತೆ ಸಂಬಂಧ ಇದ್ಯಾ ಅಂತ ಹೇಳೋಕೆ ಆಗುತ್ತಾ? ಕಾನೂನು ಉಲ್ಲಂಘನೆ ಮಾಡುವ ವ್ಯಕ್ತಿಯನ್ನು ಗೌರವಿಸಲು ಸಾಧ್ಯವಿಲ್ಲ. ನಾವು ಯಾವ ನಾಯಕನನ್ನು ಉಳಿಸಿಕೊಳ್ಳಲು ಬಂದಿಲ್ಲ. ಜತೆಗೆ ಯಾರೇ ಭ್ರಷ್ಟಾಚಾರಿಗಳಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುತ್ತೇವೆ ಎಂದರು