ಆರೋಗ್ಯ ಜಾಗೃತಿ ಮೂಡಿಸಿದ ಸೈಕಲ್ ರ್‍ಯಾಲಿ

ಬೆಂಗಳೂರು: ಹೃದಯಸಂಬಂಧಿ ಕಾಯಿಲೆಗಳ ಕುರಿತು ಜನಜಾಗೃತಿ ಮೂಡಿಸುವುದಕ್ಕಾಗಿ ಬೀಯಿಂಗ್ ಸೋಷಿಯಲ್ ಸಂಸ್ಥೆ ಆಯೋಜಿಸಿದ್ದ ಸೈಕಲ್ ರ್ಯಾಲಿ ಯಶಸ್ವಿಯಾಗಿ ನಡೆಯಿತು.
ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಮಾಧ್ಯಮ ಸಹಯೋಗದಲ್ಲಿ ಬೀಯಿಂಗ್ ಸೋಷಿಯಲ್ ಹಾಗೂ ಗೋಲ್ಡ್ಸ್ ಜಿಮ್ ಜತೆಗೂಡಿ ಆಯೋಜಿಸಿದ್ದ ಸೈಕಲ್ ರ್ಯಾಲಿಯಲ್ಲಿ 250ಕ್ಕೂ ಅಧಿಕ ಮಂದಿ ಪಾಲ್ಗೊಂಡರು.
ಬೆಳಗ್ಗೆ 7 ಗಂಟೆಗೆ ವಿಧಾನ ಸೌಧದ ಮುಂಭಾಗ ಬೀಯಿಂಗ್ ಸೋಷಿಯಲ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಾಧಿಕಾರಿ ಪ್ರವೀಣ್ ಶುಕ್ಲಾ ಸೈಕ್ಲಿಂಗ್ಗೆ ಚಾಲನೆ ನೀಡಿದರು. ವಿಧಾನಸೌಧ ದಿಂದ ಆರಂಭವಾಗಿ ಕೆ.ಆರ್. ವೃತ್ತ, ನೃಪತುಂಗ ರಸ್ತೆ, ರೆಸಿಡೆನ್ಸಿ ರಸ್ತೆ, ಎಂ.ಜಿ. ರಸ್ತೆ, ಕಬ್ಬನ್ ರಸ್ತೆ, ಕಸ್ತೂರಬಾ ರಸ್ತೆ, ಕೆಂಪೇಗೌಡ ರಸ್ತೆ ಮಾರ್ಗವಾಗಿ ಮತ್ತೆ ವಿಧಾನಸೌಧದ ಮುಂಭಾ ಗಕ್ಕೆ ಬಂದು ತಲುಪಿತು.
ಸೈಕ್ಲಿಂಗ್ಗೆ ಚಾಲನೆ ನೀಡಿ ಮಾತನಾಡಿದ ಪ್ರವೀಣ್ ಶುಕ್ಲಾ, ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಜನರು ತುತ್ತಾ ಗುತ್ತಿದ್ದಾರೆ. ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಸೈಕ್ಲಿಂಗ್ ಹಮ್ಮಿಕೊಂಡಿದ್ದು, ಸಾರ್ವಜನಿಕರು ಕೂಡ ಉತ್ತಮವಾಗಿ ಸ್ಪಂದಿಸಿದ್ದಾರೆ. ಮಳೆಯ ನಡುವೆಯೂ ಹೆಚ್ಚಿನ ಜನರು ಪಾಲ್ಗೊಂಡಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಹೇಳಿದರು.
ಬೀಯಿಂಗ್ ಸೋಷಿಯಲ್ ಸಂಸ್ಥೆಯು 2005ರಲ್ಲಿ ಆರಂಭವಾಯಿತು. ಪ್ರಸ್ತುತ ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ಪುಣೆ, ದೆಹಲಿ, ಪಟನಾ ಮತ್ತು ತ್ರಿಶೂರ್ ಸೇರಿ 9 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ಪ್ರವೀಣ್ ಶುಕ್ಲಾ ಹೇಳಿದರು. ಸಂಸ್ಥೆಯು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದು, ಸೈಕ್ಲಿಗ್ನಲ್ಲಿ ಸಂಗ್ರಹವಾದ ಹಣವನ್ನು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲಾಗುತ್ತದೆ ಎಂದು ಪ್ರವೀಣ್ ಶುಕ್ಲಾ ಮಾಹಿತಿ ನೀಡಿದರು. ಸಂಘಟಕ ಜಯರಾಮ್ ಮತ್ತಿತರರಿದ್ದರು.
ನಿರೀಕ್ಷೆಗೂ ಮೀರಿ ಸ್ಪಂದನೆ
ಜಿಟಿ ಜಿಟಿ ಮಳೆ ಕಾರಣ ಸೈಕ್ಲಿಂಗ್ನಲ್ಲಿ 50 ಜನ ಪಾಲ್ಗೊಳ್ಳಬಹುದು ಎಂಬ ನಿರೀಕ್ಷೆ ಹೊಂದಲಾಗಿತ್ತು. ಆದರೆ, 250ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರಯ, ಮುಂದಿನ ದಿನಗಳಲ್ಲಿ ಮತ್ತಷ್ಟು ಮೇಳಗಳನ್ನು ಆಯೋಜಿಸಲು ಇದು ಪ್ರೇರಣೆಯಾಗಿದೆ ಎಂದು ರ್ಯಾಲಿಯ ಸಂಯೋಜಕಿ ಮಂಜುಳ ಬಬಲಾಬಿ ಪ್ರತಿಕ್ರಿಯಿಸಿದರು.
ನಾನು ಇದೇ ಮೊದಲ ಬಾರಿಗೆ ಸೈಕಲ್ ರ್ಯಾಲಿಯಲ್ಲಿ ಪಾಲ್ಗೊಂಡಿ ರುವೆ. 5ರಿಂದ 8 ಕಿ.ಮೀ. ಸೈಕಲ್ ತುಳಿಯ ಬಹುದು ಎಂದು ಕೊಂಡಿದ್ದು, 12 ಕಿ.ಮೀ. ದೂರ ಕ್ರಮಿಸುವ ಗುರಿ ಹೊಂದಿರುವೆ. ಆಗಿಂದಾಗ್ಗೆ ಸೈಕಲ್ ರ್ಯಾಲಿಯಲ್ಲಿ ಪಾಲ್ಗೊಳ್ಳುವುದರಿಂದ ಅರೋಗ್ಯ ಮತ್ತಷ್ಟು ಸದೃಢವಾಗಿರಲು ಸಹಕಾರಿಯಾಗಲಿದೆ.
| ಸಂದೀಪ್ ಪೈ ಸೈಕಲ್ ಸವಾರ