ಸೈಕಲ್​ ಏರಿ ಅಪ್ಪು ಸಮಾಧಿಗೆ ಬಂದ ಡಾಲಿ ಧನಂಜಯ್; 'ಹೆಡ್​ ಬುಷ್​' ಚಿತ್ರಕ್ಕೆ ಡಿಫರೆಂಟ್​ ಪ್ರಚಾರ

ಸೈಕಲ್​ ಏರಿ ಅಪ್ಪು ಸಮಾಧಿಗೆ ಬಂದ ಡಾಲಿ ಧನಂಜಯ್; 'ಹೆಡ್​ ಬುಷ್​' ಚಿತ್ರಕ್ಕೆ ಡಿಫರೆಂಟ್​ ಪ್ರಚಾರ
ಇದು ರೆಟ್ರೋ ಕಾಲದ ಕಥೆಯುಳ್ಳ ಸಿನಿಮಾ. ಹಾಗಾಗಿ ಧನಂಜಯ್​ ಅವರು ಸೈಕಲ್​ ಏರಿ ರೆಟ್ರೋ ಶೈಲಿಯಲ್ಲೇ ಸಿನಿಮಾದ ಪ್ರಚಾರ ಮಾಡಿದ್ದಾರೆ.

ಬೆಂಗಳೂರಿನ ಭೂಗತ ಲೋಕದ ಕಥೆ ಇರುವ 'ಹೆಡ್​ ಬುಷ್​' (Head Bush) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಈ ಚಿತ್ರದಲ್ಲಿ ಡಾಲಿ ಧನಂಜಯ್​ (Daali Dhananjay) ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅಕ್ಟೋಬರ್​ 21ರಂದು ಈ ಸಿನಿಮಾ ರಿಲೀಸ್​ ಆಗಲಿದೆ. ಈಗಾಗಲೇ ಹಲವು ಬಗೆಯಲ್ಲಿ ಪ್ರಚಾರ ಮಾಡಲಾಗುತ್ತಿದೆ. ಇದು ರೆಟ್ರೋ ಕಾಲದ ಕಥೆಯುಳ್ಳ ಸಿನಿಮಾ. ಹಾಗಾಗಿ ರೆಟ್ರೋ ಶೈಲಿಯಲ್ಲೇ ಸೈಕಲ್​ ಏರಿ ಸಿನಿಮಾದ ಪ್ರಚಾರ ಮಾಡಿದ್ದಾರೆ ಹಾಗೂ ರಘು ಮುಖರ್ಜಿ. ಬೆಂಗಳೂರಿನ ರಸ್ತೆಗಳಲ್ಲಿ ಅವರಿಬ್ಬರು ಸೈಕಲ್​ ಸವಾರಿ ಮಾಡಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರ ಸಮಾಧಿಗೆ (Puneeth Rajkumar Samadhi) ಭೇಟಿ ನೀಡಿ, ನಮನ ಸಲ್ಲಿಸಿದ್ದಾರೆ.