ಇನ್ಸ್ಟಾಗಾಮ್ ಖಾತೆ ಹೊಂದಿದ್ದಾರೆ ಸಂಜಯ್ ದತ್ ರ ಅವಳಿ ಮಕ್ಕಳು..!

ಇನ್ಸ್ಟಾಗಾಮ್ ಖಾತೆ ಹೊಂದಿದ್ದಾರೆ ಸಂಜಯ್ ದತ್ ರ ಅವಳಿ ಮಕ್ಕಳು..!

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹಾಗೂ ಅವರ ಮಕ್ಕಳ ಮೇಲೆ ಎಲ್ಲರ ಕಣ್ಣಿರುತ್ತದೆ. ಹಾಗೆಯೇ ಬಾಲಿವುಟ್ ನಟ ಸಂಜಯ್ ದತ್ ಅವರ ಅವಳಿ ಮಕ್ಕಳು, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಂಜಯ್ ದತ್ ಅವರ 10 ವರ್ಷದ ಮಕ್ಕಳಾದ ಶಹರಾನ್ ಮತ್ತು ಇಕ್ರಾ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಇವರ ತಾಯಿ ಮಾನ್ಯತಾ ದತ್ ನಿಭಾಯಿಸುತ್ತಾರೆ.

ಪುತ್ರ ಶಹರಾನ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೂರು ಫೋಟೋಗಳು ಹಾಗೂ ಒಂದು ವಿಡಿಯೋ ಪೋಸ್ಟ್ ಮಾಡಲಾಗಿದೆ. ಹಾಗೆಯೇ ಇಕ್ರಾ ಅವರ ಪೇಜ್ ನಲ್ಲಿ ಮೂರು ಫೋಟ್ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಆಕೆಯ ಕೋಣೆಯ ತುಂಬೆಲ್ಲಾ ಟೆಡ್ಡಿಬೇರ್ ತುಂಬಿರುವುದು ಕಾಣಸಿಗುತ್ತದೆ. ಸಂಜಯ್ ದತ್ ಹಾಗೂ ಮಾನ್ಯತಾ ತಮ್ಮ ಮಕ್ಕಳ ಫೋಟೋಗಳನ್ನು ಶೇರ್ ಮಾಡಿದ್ದಾರೆ.