ಮಂಗಳವಾರ ಪ್ರಧಾನಿಯಿಂದ ಇಂಡಿಯಾದ ಜಿ-20 ಅಧ್ಯಕ್ಷತೆಯ ಲಾಂಛನ ಬಿಡುಗಡೆ

ಮಂಗಳವಾರ ಪ್ರಧಾನಿಯಿಂದ ಇಂಡಿಯಾದ ಜಿ-20 ಅಧ್ಯಕ್ಷತೆಯ ಲಾಂಛನ ಬಿಡುಗಡೆ

ಹೊಸದಿಲ್ಲಿ, : ಭಾರತದ ಜಿ 20ಯ ಅಧ್ಯಕ್ಷತೆಯ ಲಾಂಛನ, ವಿಷಯ ಹಾಗೂ ವೆಬ್ಸೈಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬಿಡುಗಡೆಗೊಳಿಸಲಿದ್ದಾರೆ. ದೇಶಾದ್ಯಂತ ಹಲವು ಸ್ಥಳಗಳಲ್ಲಿ 32 ವಿಭಿನ್ನ ಸೆಕ್ಟರ್ಗಳಲ್ಲಿ 200ಕ್ಕೂ ಅಧಿಕ ಸಭೆಗಳನ್ನು ನಡೆಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ಅಧ್ಯಕ್ಷತೆಯ ವಿವರಗಳನ್ನು ಸಂಜೆ 4.30ಕ್ಕೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅನಾವರಣಗೊಳಿಸಲಿದ್ದಾರೆ.

'ಪ್ರಧಾನಿ ಅವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ ಜಾಗತಿಕ ಮಟ್ಟದಲ್ಲಿ ನಾಯಕತ್ವದ ಪಾತ್ರವನ್ನು ವಹಿಸಿಸಕೊಳ್ಳುವ ನಿಟ್ಟಿನಲ್ಲಿ ಭಾರತದ ವಿದೇಶಾಂಗ ನೀತಿಯು ವಿಕಸನಗೊಳ್ಳುತ್ತಿದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯ ಹೇಳಿಕೆ ತಿಳಿಸಿದೆ.

ಭಾರತ 2022 ಡಿಸೆಂಬರ್ 1ರಿಂದ ಜಿ20ಯ ನಾಯಕತ್ವವನ್ನು ವಹಿಸಿಕೊಳ್ಳಲಿದೆ ಎಂದು ಅದು ಹೇಳಿದೆ.