ರೇಷನ್ ಅಕ್ಕಿ ಕಳ್ಳಸಾಗಣೆ ವಿಚಾರ; ಹುಬ್ಬಳ್ಳಿ ಪ್ರತಿಷ್ಠಿತ ಉದ್ಯಮಿ ಗಡಿಪಾರು
ಹುಬ್ಬಳ್ಳಿ: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ರಂಗೇರಿದೆ. ಈಗಾಗಲೇ ಮೂರು ಪಕ್ಷಗಳ ಪ್ರಚಾರ ಬೇಟೆ ಜೋರಾಗಿದೆ.
ಈ ಹಿನ್ನೆಲೆ ರಾಜ್ಯದಲ್ಲಿ ಪೊಲೀಸರು ಅಲರ್ಟ್ ಆಗಿದೆ.
ಅವರನ್ನು ಬೀದರ್ ಗೆ ಆರು ತಿಂಗಳ ಕಾಲ ಗಡಿಪಾರು ಮಾಡಲಾಗಿದೆ. ತುಂಬಾ ವರ್ಷಗಳಿಂದ ಮಂಜುನಾಥ್ ಬಾಲಾಜಿ ಟ್ರೇಡಿಂಗ್ ಹೆಸರಿನಲ್ಲಿ ನಲ್ಲಿ ಬಡವರಿಗೆ ನೀಡುವ ಪಡಿತರ ಅಕ್ಕಿಯನ್ನು ಬೇರೆ ರಾಜ್ಯಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ. ಅಲ್ಲದೆ ಇದರ ಸಾಕ್ಷಿ ಪುರಾವೆಗಳನ್ನು ಕೂಡ ನಾಶ ಮಾಡುತ್ತಿದ್ದ.
ಇದರಿಂದಾಗಿ ಧಾರವಾಡ ಪೊಲೀಸ್ ಎಸ್ಪಿ ಲೋಕೇಶ್ ಅವರು ಆರೋಪಿಸಿ, ಮಂಜುನಾಥ್ ಗಡಿಪಾರು ಮಾಡುವಂತೆ ಎಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ವಿಚಾರಣೆ ನಡೆಸಿದ ಎಸಿ ಅಶೋಕ್ ತೆಲಿ ಅವರು, ಆರು ತಿಂಗಳು ಮಂಜುನಾಥ್ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ವಿಜಯಪುರದಲ್ಲಿ ' ಕೈ ' ನಾಯಕ ಎಸ್.ಆರ್. ಪಾಟೀಲ್ ಫೋಟೋ ಇರುವ 'ಗಡಿಯಾರ ಗಿಫ್ಟ್ಗಳು ಪತ್ತೆ'
ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಗಲ್ಲ ಮದರಿ ಬಳಿಯ ಬಾಲಾಜಿ ಸಕ್ಕರೆ ಕಾರ್ಖಾನೆ ಗೋಡೌನ್ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಎಸ್.ಆರ್. ಪಾಟೀಲ್ ಭಾವಚಿತ್ರ ಇರುವ ರಾಶಿ ರಾಶಿ ಗಿಫ್ಟ್ಗಳು ಪತ್ತೆಯಾಗಿದೆ.ಮತದಾರರ ಸೆಳೆಯೋದಕ್ಕೆ ರಾಜ್ಯದಲ್ಲಿ ಭರ್ಜರಿ ರಣತಂತ್ರ ರೂಪಿಸುತ್ತಿದ್ದು, ಈ ನಿಟ್ಟಿನಲ್ಲಿ ವಿಜಯಪುರ ಜಿಲ್ಲೆಯಾದ್ಯಂತ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ. ಅದರಲ್ಲೂಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಎಸ್.ಆರ್. ಪಾಟೀಲ್ ಭಾವಚಿತ್ರ ಇರುವ ರಾಶಿ ರಾಶಿ ಗಡಿಯಾರಗಳು ಹಾಗೂ ಟೀ ಶರ್ಟ್ಗಳು ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಡಿಸಿ ವಿಜಯಮಹಾಂತೇಶ ದಾನಮ್ಮನವರ್ ಹಾಗೂ ಎಸ್ಪಿ ಆನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದಿದ್ದಾರೆ.