ಚಿಕ್ಕಮಗಳೂರು ಶಾಲೆಯಲ್ಲಿ ಮತ್ತೆ 38 ಮಂದಿಗೆ ಕೋವಿಡ್

ಚಿಕ್ಕಮಗಳೂರು ಶಾಲೆಯಲ್ಲಿ ಮತ್ತೆ 38 ಮಂದಿಗೆ ಕೋವಿಡ್

ಚಿಕ್ಕಮಗಳೂರು, ಡಿಸೆಂಬರ್ 06; ಚಿಕ್ಕಮಗಳೂರಿನ ಜವಾಹರ್ ನವೋದಯ ವಿದ್ಯಾಲಯಕೋವಿಡ್ಹಾಟ್‌ ಸ್ಪಾಟ್‌ ಆಗಿದೆ. ಸೋವಾರ ಮತ್ತೆ 38 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ.

ಬಾಳೆಹೊನ್ನೂರು ಸೀಗೋಡಿನಲ್ಲಿರುವ ಜವಾಹರ್ ನವೋದಯ ವಿದ್ಯಾಲಯದ 59 ವಿದ್ಯಾರ್ಥಿಗಳು ಮತ್ತು 4 ಮಂದಿ ಶಿಕ್ಷಕರು ಮತ್ತು 6 ಮಂದಿ ಸಿಬ್ಬಂದಿ ಸೇರಿದಂತೆ 69 ಮಂದಿಗೆ ಸೋಂಕು ತಗುಲಿದ್ದು, ಭಾನುವಾರ ಖಚಿತವಾಗಿತ್ತು.

ಚಿಕ್ಕಮಗಳೂರು; ಶಾಲೆಯಲ್ಲಿ 69 ಮಂದಿಗೆ ಕೋವಿಡ್ ಸೋಂಕು

ಸೋಮವಾರ ಮತ್ತೆ 38 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 4 ದಿನದಲ್ಲಿ ವಸತಿ ಶಾಲೆಯಲ್ಲಿ 107 ಪ್ರಕರಣಗಳು ಪತ್ತೆಯಾಗಿದ್ದು, ಸೋಮವಾರ 30 ವಿದ್ಯಾರ್ಥಿಗಳು, ಮೂವರು ಶಿಕ್ಷಕರ ವರದಿ ಪಾಸಿಟಿವ್ ಬಂದಿದೆ.

15 ವರ್ಷದ ಮಕ್ಕಳಿಗೆ ತಪ್ಪಾಗಿ ಕೋವಿಡ್ 19 ಲಸಿಕೆ, ಆಸ್ಪತ್ರೆಗೆ ದಾಖಲು

ಶಾಲೆಯ 94 ವಿದ್ಯಾರ್ಥಿಗಳು, 13 ಶಿಕ್ಷಕರರು ಸೇರಿದಂತೆ 107 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಮೊದಲು ಶಿಕ್ಷಕರಿಗೊಬ್ಬರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ನಂತರ 418 ವಿದ್ಯಾರ್ಥಿಗಳು, ಸಿಬ್ಬಂದಿ ಗಳ ಸ್ವ್ಯಾಬ್ ಅನ್ನು ಆರೋಗ್ಯ ಇಲಾಖೆ ಪಡೆದುದ್ದು 418 ರಲ್ಲಿ 107 ಪಾಸಿಟಿವ್ ಕೇಸ್ ಪತ್ತೆಯಾಗಿದೆ.

ಕೋವಿಡ್ ಸೋಂಕಿತರ ಶವ 15 ತಿಂಗಳ ಬಳಿಕ ಪತ್ತೆ; ತನಿಖೆಗೆ ಸಮಿತಿ

ಚಿಕ್ಕಮಗಳೂರು ಜಿಲ್ಲಾಡಳಿತ ಈಗಾಗಲೇ ಜವಾಹರ್ ನವೋದಯ ವಿದ್ಯಾಲಯವನ್ನು ಸೀಲ್ ಡೌನ್ ಮಾಡಿದೆ. ಸೋಂಕು ಪತ್ತೆಯಾದವರಲ್ಲಿ ಯಾವುದೇ ರೋಗದ ಲಕ್ಷಣಗಳಿಲ್ಲ. ಎಲ್ಲರನ್ನೂ ವಸತಿ ಶಾಲೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ.

ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ಎಲ್ಲರ ಆರೋಗ್ಯದ ಬಗ್ಗೆ ನಿರಂತರ ನಿಗಾವಹಿಸಲಾಗಿದೆ. ಶಾಲೆಯನ್ನು ಸ್ಯಾನಿಟೈಸ್ ಮಾಡುವ ಕೆಲಸ ಸಹ ನಡೆಯುತ್ತಿದೆ.

ಭಾನುವಾರದ ಹೆಲ್ತ್ ಬುಲೆಟಿನ್‌ ಪ್ರಕಾರ ಕರ್ನಾಟಕದಲ್ಲಿ 456 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 66 ಹೊಸ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಒಟ್ಟು ಸಕ್ರಿಯ ಪ್ರಕರಣ 108.