ಸಚಿವ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ. ಶಿವಕುಮಾರ್
ಬೆಳಗಾವಿ: ಡಿ.ಕೆ. ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿದ್ದು ಯಾಕೆ ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನೆಗೆ ತಿರುಗೇಟು ನೀಡಿರುವ ಡಿ.ಕೆ.ಶಿ. ನಿಮಗೆ ಸಪೋರ್ಟ್ ಮಾಡಲಿಲ್ಲ, ನಿಮ್ಮ ಜೊತೆ ಬರ್ಲಿಲ್ಲ ಎಂದು ನೀವು ನನ್ನನ್ನು ತಿಹಾರ್ ಜೈಲಿಗೆ ಕಳಿಸಿದ್ರಿ.
ರಾಜ್ಯದಲ್ಲಿ ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇವೆ ಎಂಬ ಬಿ.ಎಸ್.ಯಡಿಯೂರಪ್ಪ ಹೇಳಿಕೆ ಪ್ರತಿಕ್ರಿಯಿಸಿ, ಬಿ.ಎಸ್.ವೈ. ತಮಗಾದ ನೋವನ್ನ ಬಿಜೆಪಿ ಮೇಲೆ ಹೇರಲಾಗಲ್ಲ ಎಂದು ನಮ್ಮ ಮೇಲೆ ಹೇರುತ್ತಿದ್ದಾರೆ. ಅವರ ದುಃಖ, ದುಮ್ಮಾನ, ರೇಡ್, ಮಾನಸಿಕ ಹಿಂಸೆ, ರಾಜೀನಾಮೆ ನೋವು ಇದೆಲ್ಲವನ್ನು ಹೊರಹಾಕಬೇಕಲ್ಲ, ನಾವು ಫ್ರೀಯಾಗಿದ್ದೇವೆ ಎಂದು ನಮ್ಮ ಮೇಲೆ ಹಾಕುತ್ತಿದ್ದಾರೆ. ಬಿಜೆಪಿ ಸರ್ಕಾರದ ಸ್ಥಿರತೆಯನ್ನು ಅವರ ಪಕ್ಷದವರೇ ಹಾಳು ಮಾಡುತ್ತಿದ್ದಾರೆ ಎಂದು ಗುಡುಗಿದರು.