ವಾರಾಂತ್ಯ ಕರ್ಫ್ಯೂ: ಬೆಳಗಾವಿ ಜಿಲ್ಲೆಯಲ್ಲಿ ಬಹುತೇಕ ಸ್ತಬ್ಧ
ಬೆಳಗಾವಿ: ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ನಗರವೂ ಸೇರಿ ಜಿಲ್ಲೆ ಬಹುತೇಕ ಸ್ತಬ್ಧವಾಗಿದೆ.
ಸದಾ ಪ್ರಯಾಣಿಕರಿಂದ ತುಂಬಿರುತ್ತಿದ್ದ ಬೆಳಗಾವಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕೆಲವರಷ್ಟೆ ಕಂಡುಬಂದರು. ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಬಸ್ ಸೇವೆ ಎಂದಿನಂತೆ ಆರಂಭಗೊಂಡಿದೆ.
ನಗರದ ಮುಖ್ಯ ರಸ್ತೆಗಳು, ವೃತ್ತಗಳು ಜನರಿಲ್ಲದೆ ಭಣಗುಡುತ್ತಿವೆ. ಅನಗತ್ಯವಾಗಿ ರಸ್ತೆಗಳಿದವರನ್ನು ಪೊಲೀಸರು ತಡೆದರು. ಅವಶ್ಯ ವಸ್ತುಗಳು, ಸಾಮಗ್ರಿಗಳ ಅಂಗಡಿಗಳು ತೆರೆದಿವೆ.