ಶಾಸಕರೇ ನಿಮ್ಮ ಹೆಸರಲ್ಲೂ ಆಕ್ರಮ ಲೇಜೌಟ್ ಇದೆಯಾ.

ಧಾರವಾಡ.

ಧಾರವಾಡದಲ್ಲಿ ನಿರ್ಮಾಣವಾಗುತ್ತಿರುವ ಅಕ್ರಮ ಲೇಔಟ್ಗಳ ಬಗ್ಗೆ ಶಾಸಕ ಅಮೃತ ದೇಸಾಯಿ ಅವರು ಇತ್ತೀಚೆಗೆ ವಿಧಾನಸಭೆಯಲ್ಲಿ ಮಾತನಾಡಿ ಗಮನ ಸೆಳೆದಿದ್ದರು. ಅಕ್ರಮ ಲೇಔಟ್ ಮಾಡುವವರು ರೌಡಿಶೀಟರ್ಗಳೇ ಆಗಿದ್ದಾರೆ. ಅಂತವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಅಂತಾ ಹೇಳಿದ್ರು, ಇದೀಗ ಅವರ ಹೆಸರಿನಲ್ಲೇ ಲೇಜೌಟ್ ಇದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆರೋಪಿಸಿದ್ರು. ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಅಕ್ರಮ ಲೇಔಟ್ ಶಾಸಕರ ಹೆಸರ ಇದೆ. ಧಾರವಾಡದ ಮಟ್ಟಿ ಪ್ಲಾಟ್ನಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಲೇಔಟ್ಗಳನ್ನು ಹುಡಾ ಅಧಿಕಾರಿಗಳು ತೆರವು ಮಾಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ರು. ಇನ್ನು ಶಾಸಕರ ಹೆಸರಿನಲ್ಲೇ ಗರಗದಲ್ಲಿ ಅಮೃತ ಬಡಾವಣೆ ಎಂಬ ಅಕ್ರಮ ಲೇಔಟ್ ಇದೆ. ಅದರ ಬಗ್ಗೆ ಶಾಸಕರು ಮಾತನಾಡಬೇಕು. ಸದ್ಯ ತೆರವುಗೊಳಿಸುತ್ತಿರುವ ಲೇಔಟ್ ಮಾಲೀಕರು ಮೊನ್ನೆ ನಡೆದ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದಿದ್ದಾರೆ. ಈ ಲೇಔಟ್ ಬಗ್ಗೆ ನಾನು ಬಡವರ ಪರವಾಗಿ ಹೋರಾಟ ಮಾಡಿದ್ದೆ ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಶಾಸಕರು ಈ ಲೇಔಟ್ ತೆರವುಗೊಳಿಸುವ ಕೆಲಸ ಮಾಡಿಸುತ್ತಿದ್ದಾರೆ ಎಂಬ ಆರೋಪವನ್ನು ಬಸವರಾಜ ಕೊರವರ ಶಾಸಕರ ಮೇಲೆ ಆರೋಪ ಮಾಡಿ ವಾಗ್ವಾದ ನಡೆಸಿದ್ರು.