ಸಿದ್ದರಾಮಯ್ಯ 2 ಕ್ಷೇತ್ರದಿಂದ ಸ್ಪರ್ಧೆ ಮಾಡ್ಲೇಬೇಕು : ಪುತ್ರ ಯತೀಂದ್ರಗೆ ಸಂದೇಶ ನೀಡಿದ ' ಚೊಟ್ಟನಹಳ್ಳಿ ಚಿಕ್ಕಮ್ಮ ದೇವಿ '

ಈ ಮೊದಲೇ ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯ ಚುನಾವಣೆ ಸ್ಪರ್ಧೆ ಭಾರೀ ಚರ್ಚೆ ನಡೆಯುತ್ತಿತ್ತು. ಈ ಬಗ್ಗೆ ಈಗಾಗಲೇ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆಂದು ಸಿದ್ದರಾಮಯ್ಯ ಅವರೇ ಘೋಷಣೆ ಮಾಡಿದ್ದರು.
ಈ ಬೆನ್ನಲ್ಲೆ ಕಳೆದ ವಾರ ಮಳವಳ್ಳಿಗೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಭೇಟಿ ನೀಡಿದ್ದರು. ಈ ವೇಳೆಚೊಟ್ಟನಹಳ್ಳಿಯಲ್ಲಿರುವ ಚಿಕ್ಕಮ್ಮ ದೇವಿ ದೇವಸ್ಥಾನಕ್ಕೆ ಭೇಟಿಯಾಗಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮೈ ಮೇಲೆ ಬಂದ ಆದಿನಾಡು ಚಿಕ್ಕಮ್ಮ ದೇವಿ ವಿಶೇಷ ಸಂದೇಶ ನೀಡಿದ್ದಾರೆ.
ಬಾಹುಬಲ ಎರಡು ಕಡೆ ಚಾಚಬೇಕೆಂದು ದೇವಿ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು. 1 ಕ್ಷೇತ್ರದಿಂದ ಸ್ಪರ್ಧಿಸಿದ್ಗರೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ. ಈ ದೇವಿಯ ಸಂದೇಶವನ್ನು ಸಿದ್ದರಾಮಯ್ಯ ಪುತ್ರ ಯತೀಂದ್ರ ಪಾಲಿಸುತ್ತಾರ ಅನ್ನೋದನ್ನು ಕಾದುನೋಡಬೇಕಾಗಿದೆ. ಈ ಮೂಢನಂಬಿಕೆಗಳನ್ನು ರಾಜಕೀಯನಾಯಕರುಗಳು ಗಂಭೀರ ಚರ್ಚೆ ಮಾಡುವ ಎಲ್ಲಾ ಸಾಧ್ಯತೆಯಿದೆ.