ಯುವಕನಿಗೆ ಅಮಾನುಷವಾಗಿ ಚಿತ್ರಹಿಂಸೆ ನೀಡಿ ಕೊಂದ ಪಾಪಿಗಳು : ಕರವೇ ಜಿಲ್ಲಾಧ್ಯಕ್ಷ, ಪುತ್ರ ಸೇರಿ 10 ಮಂದಿ ಅರೆಸ್ಟ್

ಬೆಂಗಳೂರು : ಯುವಕನನ್ನು ಕಿಡ್ನಾಪ್ ಮಾಡಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದ ಖತರ್ನಾಕ್ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಕೋಣನಕುಂಟೆ ನಿವಾಸಿ ಹೆಚ್.ಶರತ್ ಎಂಬಾತನನ್ನು ಕಿಡ್ನಾಪ್ ಮಾಡಿ ಚಿತ್ರಹಿಂಸೆ ನೀಡಿ ಕೊಲೆಗೈದು ಚಾರ್ಮಾಡಿಘಾಟ್ನಲ್ಲಿ ಮೃತದೇಹ ಎಸೆಯಲಾಗಿತ್ತು.
ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅಗಲಗುರ್ಕಿ ಚಲಪತಿ ಅಲಿಯಾಸ್ ವೆಂಕಟಾಚಲಪತಿ, ಆತನ ಮಗ ಎ.ವಿ ಶರತ್ ಕುಮಾರ್ ಸೇರಿದಂತೆ ಒಟ್ಟಾರೆ 10 ಮಂದಿಯನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಫೈನಾನ್ಷಿಯರ್ ಆಗಿದ್ದ.ಶರತ್ ಕುಮಾರ್ನನ್ನು ಮಾರ್ಚ್ 21 ರಂದು ಕಿಡ್ನಾಪ್ ಮಾಡಲಾಗಿತ್ತು, ಗೌರಿಬಿದನೂರಿನ ತೋಟದ ಮನೆಗೆ ಕರೆದುಕೊಂಡು ಬಂದು ಅರೆಬೆತ್ತಲೆಗೊಳಿಸಿ ಬಹಳ ಕ್ರೂರವಾಗಿ ಚಿತ್ರಹಿಂಸೆ ನೀಡಿದ್ದರು. ಮೈ ಮೇಲೆ ಬಾಸುಂಡರ ಬರುವಂತೆ ತೀವ್ರ ಹಲ್ಲೆ ನಡೆಸಿದ್ದರು. ನಂತರ ಮರಕ್ಕೆ ನೇತು ಹಾಕಿ ಹೊಡೆದಿದ್ದರು. ಪಾಪಿಗಳ ಹೊಡೆತದ ನೋವು ತಾಳಲಾರದೇ ಶರತ್ ಮೃತಪಟ್ಟಿದ್ದಾನೆ, ನಂತರ ಚಾರ್ಮಾಡಿಘಾಟ್ನಲ್ಲಿ ಮೃತದೇಹ ಎಸೆದು ಬಂದಿದ್ದರು. ಬಳಿಕ ಖತರ್ನಾಕ್ ಆರೋಪಿಗಳು ತಮಗೇನು ಗೊತ್ತೇ ಇಲ್ಲ ಎಂಬುವಂತೆ ಇದ್ದರು.ಇದೀಗ ಆರೋಪಿಗಳಾದ ಚಿಕ್ಕಬಳ್ಳಾಪುರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅಗಲಗುರ್ಕಿ ಚಲಪತಿ ಅಲಿಯಾಸ್ ವೆಂಕಟಾಚಲಪತಿ, ಆತನ ಮಗ ಎ.ವಿ ಶರತ್ ಕುಮಾರ್ ಸೇರಿದಂತೆ ಒಟ್ಟಾರೆ 10 ಮಂದಿಯನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.