ಪರೇಶ್ ಮೇಸ್ತ ಪ್ರಕರಣ ʼಮರು ತನಿಖೆಗೆ ನಿಶ್ಚಿತʼ; ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಹೊನ್ನಾವರದಲ್ಲಿ ಪರೇಶ್ ಮೇಸ್ತ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿಬಿಐ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದೆ. ಈ ವಿಚಾರವಾಗಿ ರಾಜಕೀಯ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆ ಗ್ರಾಸವಾಗಿತ್ತು. ಸಾವಿನ ವಿಷಯದಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕ ಫೈಟಿಂಗ್ ಜೋರಾಗಿತ್ತು.
ಪರೇಶ್ ಮೇಸ್ತ ಪ್ರಕರಣವನ್ನು ಮರು ತನಿಖೆ ನಿಶ್ಚಿತವಾಗಿದೆ. ಶೀಘ್ರವೇ ಪರೇಶ್ ಮೇಸ್ತ ಕುಟುಂಬದಿಂದ ಕಾನೂನು ಹೋರಾಟ ಮಾಡಲಿದ್ದಾರೆ. ಸಿಬಿಐ ವರದಿ ಬೆನ್ನಲ್ಲೇ ಕಾನೂನು ಹೋರಾಟಕ್ಕೆ ನಿರ್ಧಾರ ಮಾಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.ಕರು ಮರು ತನಿಖೆಗೆ ಆಗ್ರಹಿಸಿದ್ದರು.