ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡಲು ರೆಡಿಯಾದ ಸಂಸದೆ ಸುಮಲತಾ ಅಂಬರೀಷ್​ಗೆ ಬಿಗ್ ಶಾಕ್

ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡಲು ರೆಡಿಯಾದ ಸಂಸದೆ ಸುಮಲತಾ ಅಂಬರೀಷ್​ಗೆ ಬಿಗ್ ಶಾಕ್

ಮಂಡ್ಯ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡಲು ಸಜ್ಜಾದ ಸಂಸದೆ ಸುಮಲತಾ ಅಂಬರೀಷ್​ ಅವರಿಗೆ ಇದೀಗ ಬಿಗ್​ ಶಾಕ್ ಒಂದು​ ಎದುರಾಗಿದೆ.

ವಿಧಾನಸಭಾ ಚುನಾವಣೆಯ ಕಣಕ್ಕಿಳಿಯಲು ಸುಮಲತಾ ಅವರು ತಯಾರಿ ನಡೆಸುತ್ತಿದ್ದು, ತಾವು ಕಣ್ಣಿಟ್ಟಿರುವ ಮೂರು ಕ್ಷೇತ್ರಗಳ ಪೈಕಿ ಎರಡರಲ್ಲಿ ಸುಮಲತಾರಿಗೆ ಸಂಕಷ್ಟ ಎದುರಾಗಲಿದೆ.

ಮಂಡ್ಯ ಹಾಗೂ ಮೇಲುಕೋಟೆಯಲ್ಲಿ ಸುಮಲತಾ ಸ್ಪರ್ಧೆಗೆ ರೈತ ಸಂಘ ಭಾರೀ ವಿರೋಧ ವ್ಯಕ್ತಪಡಿಸಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವಿಗೆ ರೈತ ಸಂಘ ಪ್ರಮುಖ ಪಾತ್ರ ವಹಿಸಿತ್ತು. ಇದೀಗ ಮಂಡ್ಯ ಮತ್ತು ಮೇಲುಕೋಟೆಯಲ್ಲಿ ರೈತ ಸಂಘ ಸ್ಪರ್ಧಿಸಲು ನಿರ್ಧಾರ ಮಾಡಿದೆ. ಮಂಡ್ಯದಿಂದ ಮಧುಚಂದನ್ ಹಾಗೂ ಮೇಲುಕೋಟೆಯಿಂದ ದರ್ಶನ್ ಪುಟ್ಟಣ್ಣಯ್ಯ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ.

ಇತ್ತೀಚೇಗಷ್ಟೇ ಸರ್ವೋದಯ ಕರ್ನಾಟಕ ಪಕ್ಷ ಹೆಸರು ಘೋಷಣೆ ಮಾಡಿದ್ದು, ಟಿಕೆಟ್ ಘೋಷಣೆ ಬೆನ್ನಲ್ಲೆ ಅಭ್ಯರ್ಥಿಗಳು ಎರಡು ಕ್ಷೇತ್ರದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇಬ್ಬರು ಕೂಡ ಸುಮಲತಾ ಅವರು ಬೆಂಬಲ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ಋಣ ತೀರಿಸುವ ಮಾತನಾಡಿದ್ದರು. ಇದೀಗ ಆ ಮಾತಿಗೆ ಸ್ವಾಭಿಮಾನಿ ಸಂಸದೆ ಉಲ್ಟಾ ಹೊಡೆದ್ರಾ ಎನ್ನುವ ಪ್ರಶ್ನೆ ಮೂಡಿದೆ.

ಒಂದು ವೇಳೆ ಸುಮಲತಾ ಅವರು ಮಾತು ತಪ್ಪಿದ್ರೆ ಅವರ ವಿರುದ್ಧವೇ ಸಮರ ಸಾರಲು ರೈತ ಸಂಘ ಮುಂದಾಗಿದೆ. ಈಗಾಗಲೇ ಕುಸ್ತಿ ಅಖಾಡಕ್ಕೆ ಧುಮುಕಿದ್ದೀವಿ. ಯಾರೇ ಬಂದರು ಹೋರಾಡ್ತೀವಿ. ಅದು ಸುಮಲತಾ ಆದ್ರು ಸರಿ, ಬೇರೆ ಯಾರೇ ಆದರು ಸರಿ. ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೆ ಇಲ್ಲ ಎಂದು ರೈತ ಸಂಘದ ನಾಯಕರು ಹೇಳುತ್ತಿದ್ದಾರೆ.