ಚಿತ್ರದುರ್ಗ: ಕ್ಷುಲ್ಲಕ ವಿಚಾರಕ್ಕೆ 2 ಕುಟುಂಬಗಳ ನಡುವೆ ಜಗಳ; ವ್ಯಕ್ತಿ ಕೊಲೆಯಲ್ಲಿ ಅಂತ್ಯ
ಚಿತ್ರದುರ್ಗ: ಕ್ಷುಲ್ಲಕ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳವಾಗಿದ್ದು, ವ್ಯಕ್ತಿಯನ್ನು ಕೊಲೆ (Murder) ಮಾಡಿದ ಘಟನೆ ಚಿತ್ರದುರ್ಗ ತಾಲ್ಲೂಕಿನ ಜಾಲಿಕಟ್ಟೆ ಗ್ರಾಮದಲ್ಲಿ ನಡೆದಿದೆ. ಕಟ್ಟಿಗೆಯಿಂದ ತಲೆಗೆ ಹೊಡೆದು ಜಾಲಿಕಟ್ಟೆ ಗ್ರಾಮದ ನಿವಾಸಿ ಮಹಾಂತೇಶ(23) ನನ್ನು ಹತ್ಯೆ ಮಾಡಲಾಗಿದೆ. ಮಹಂತೇಶ್ ಮನೆ ಬಳಿ ನಿತ್ಯ ಸ್ವಾಮಿ ಎಂಬ ವ್ಯಕ್ತಿ ನಾಯಿ ಕರೆದೊಯ್ಯುತ್ತಿದ್ದ. ನಾಯಿ ಗಲೀಜು ಮಾಡುತ್ತದೆ ಎಂದು ಮಹಾಂತೇಶ ಆಕ್ಷೇಪ ಮಾಡಿದ್ದು, ಮಹಾಂತೇಶ ಮತ್ತು ಸ್ವಾಮಿ ನಡುವೆ ಗಲಾಟೆಯಾಗಿದೆ. ಕೊನೆಗೆ ಇದು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯ ಕಂಡಿದೆ. ಸದ್ಯ ಸ್ವಾಮಿ ಮತ್ತು ಆತನ ಪತ್ನಿ ಕಮಲಮ್ಮನ ವಿರುದ್ಧ ಹತ್ಯೆಗೈದಿರುವ ಆರೋಪ ಕೇಳಿ ಬಂದಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.