ಕೋಲಾರದಲ್ಲಿ ದಾಖಲೆ ಬೆಲೆಗೆ Tomoto ಮಾರಾಟ; 15 ಕೆಜಿ 1400 ರೂ.ಗೆ ಬಿಕರಿಯಾದ ಕೆಂಪುಹಣ್ಣು!

ಕೋಲಾರದಲ್ಲಿ ದಾಖಲೆ ಬೆಲೆಗೆ Tomoto ಮಾರಾಟ; 15 ಕೆಜಿ 1400 ರೂ.ಗೆ ಬಿಕರಿಯಾದ ಕೆಂಪುಹಣ್ಣು!
ಕೋಲಾರ: ಬಯಲುಸೀಮೆ ಕೋಲಾರದಲ್ಲಿ (Kolara APMC Market) ಟೊಮೆಟೊ (Tomoto) ಬೆಲೆ ಗಗನಕ್ಕೇರಿದೆ. ಇದೇ ಮೊದಲ ಬಾರಿಗೆ ದಾಖಲೆಯ ಮೊತ್ತಕ್ಕೆ ಟೊಮೆಟೊ ಮಾರಾಟವಾಗುವ ಮೂಲಕ ಹೊಸ ದಾಖಲೆಯು ನಿರ್ಮಾಣವಾಗಿದೆ. ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿರುವ, ಕೋಲಾರದ ಮಾರುಕಟ್ಟೆಯಲ್ಲಿ ಕೆಂಪುಹಣ್ಣಿಗೆ ಭರ್ಜರಿ ಬೆಲೆ ಸಿಕ್ಕಿದೆ.
ನೆನ್ನೆ ಮಂಗಳವಾರ 15 ಕೆಜಿ ತೂಕದ ಒಂದು ಬಾಕ್ಸ್ ಟೊಮೆಟೊ ಬೆಲೆ 1400 (1400 Rs To 15 KG Tomoto Box) ರೂಪಾಯಿಗೆ ಮಾರಾಟವಾಗಿದೆ.

2020-21 ನೇ ವರ್ಷದಲ್ಲಿ ಇದೇ ಮೊದಲ ಬಾರಿಗೆ ಈ ಮೊತ್ತಕ್ಕೆ ಟೊಮೆಟೊ ಮಾರಾಟವಾಗಿದ್ದು, ಈ ಹಿಂದೆ 2019 ರಲ್ಲಿ 1275 ರೂಪಾಯಿಗೆ ಟೊಮೆಟೊ ಮಾರಾಟವಾಗಿತ್ತು. ಸದ್ಯ ಈಗ ಮಾರುಕಟ್ಟೆಯಲ್ಲಿ ನಾಟಿ ಟೊಮೆಟೊ 1400 ರೂಪಾಯಿ, ಸೀಡ್ಸ್ ಟೊಮೆಟೊ 1100 ರೂಪಾಯಿ, ಒಂದು ಬಾಕ್ಸ್ ಗೆ ಮಾರಾಟವಾಗಿದ್ದು, ಅತ್ಯಧಿಕ ಮೊತ್ತವಾಗಿದೆ. ಇನ್ನು ಎಲ್ಲಾ ಟೊಮೆಟೊ ಗು ಇದೇ ಗರಿಷ್ಠ ಬೆಲೆ ಎಲ್ಲರಗೂ ಸಿಗುತ್ತಿಲ್ಲ. ಇದಕ್ಕೆ ಕಾರಣವೂ ಇದ್ದು ಗುಣಮಟ್ಟದ ಮೇಲೆ ಟೊಮೆಟೊ ಬೆಲೆ ನಿಗದಿ ಮಾಡಲಾಗುತ್ತಿದೆ. ಉತ್ತರ ಭಾರತದ ರಾಜ್ಯಗಳಿಗೆ ಸರಬರಾಜು ಆಗುವ ಟೊಮೆಟೊ ದಷ್ಟ ಪುಷ್ಟವಾಗಿ ಇರಬೇಕಿದೆ. ಅಲ್ಲದೆ ಉತ್ತಮ ಬಣ್ಣವನ್ನು ಹೊಂದಿರಬೇಕು. ಹೀಗಿದ್ದರೆ, 1 ಸಾವಿರಕ್ಕೂ ಅಧಿಕ ಮೊತ್ತವನ್ನು ರೈತರು ತಮ್ಮ ಟೊಮೆಟೋಗೆ ಪಡೆಯಬಹುದಾಗಿದೆ‌.

ಮಳೆ ಎಪೆಕ್ಟ್, ಮಾರುಕಟ್ಟೆಗೆ ಬರುತ್ತಿಲ್ಲ ರೈತರು

ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಒಂದು ಬಾಕ್ಸ್ ಟೊಮೆಟೊ ಬೆಲೆ 1400 ರೂಪಾಯಿ ದಾಟಿದ್ದು, ಕಳೆದ ನಾಲ್ಕು ದಿನದಿಂದ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆಗೆ ಟೊಮೆಟೊ ಮಾರಾಟವಾಗುತ್ತಿದೆ, ಆದರೆ ಒಂದು ವಾದದಿಂದ ಜಿಲ್ಲೆಯಾದ್ಯಂತ ಭರ್ಜರಿ ಮಳೆಯಾಗುತ್ತಿರುವ ಹಿನ್ನಲೆ, ಮಾರುಕಟ್ಟೆಗೆ ಟೊಮೆಟೊ ತರಲಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಟೊಮೆಟೊಗೆ ಭಾರೀ ಬೇಡಿಕೆಯಿದ್ದು, ಹೀಗಾಗಿ ಬೆಲೆಯೂ ಹೆಚ್ಚಾಗಿದೆ, ಇಂತಹ ಸಮಯದಲ್ಲಿ ಟೊಮೆಟೊ ಕಟಾವು ಮಾಡಿ ಮಾರುಕಟ್ಟೆಗೆ ತರಲಾಗದ ಸ್ಥಿತಿಯಲ್ಲಿ ರೈತರು ಸಿಲುಕಿದ್ದಾರೆ. ಇನ್ನು ನಿರಂತರ ಮಳೆಗೆ ಟೊಮೆಟೊ ಗಿಡಗಳಲ್ಲಿಯೇ ಹಾಳಾಗುವ ಭೀತಿಯು ಎದುರಾಗಿದೆ. ಇತ್ತ ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆ ಎಂದು ಹೆಗ್ಗಳಿಕೆ ಪಡದಿರುವ ಕೋಲಾರ ಮಾರುಕಟ್ಟೆಗೆ ಟೊಮೆಟೊ ಆವಕವಿಲ್ಲದೆ, ಮಾರುಕಟ್ಟೆ ಖಾಲಿ ಖಾಲಿ ಇರುವ ದೃಶ್ಯಗಳು ಕಂಡುಬಂತು. ಅನ್ ಸೀಸನ್ ಆದ್ದರಿಂದ ಮಾಮೂಲಿಯಾಗಿ ನಿತ್ಯ 10 ಸಾವಿರ ಬಾಕ್ಸ್ ನಷ್ಟು ಟೊಮೆಟೊ ಬರುತ್ತಿದ್ದು, ಹೆಚ್ಚಿ‌ನ ಮಳೆಯಿಂದಾಗಿ 5 ಸಾವಿರ ಬಾಕ್ಸ್ ಟೊಮೆಟೊ ಮಾರುಕಟ್ಟೆಗೆ ಬರುವುದು ಕಷ್ಟಕರವಾಗಿದೆ. '

ಈ ಬಗ್ಗೆ ಮಾತನಾಡಿರುವ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ರವಿಕುಮಾರ್ ಅವರು, ಮಳೆಯಿಂದಾಗಿ ಟೊಮೆಟೊ ಅಭಾವ ಆಗಿದೆ. ಇದರಿಂದಾಗಿ ಬೆಲೆಯೂ ಹೆಚ್ಚಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಮಂಡಿ ಮಾಲೀಕರಾದ ಸಿಎಮ್ ಆರ್ ಶ್ರೀನಾಥ್, ಟೊಮೆಟೊಗೆ ಭರ್ಜರಿ ಬೆಲೆಯಿದ್ದರು, ರೈತರ ತೋಟಗಳಲ್ಲಿ ಫಸಲು ಕಡಿಮೆ ಪ್ರಮಾಣದಲ್ಲಿದೆ ಎಂದಿದ್ದಾರೆ.

ಒಟ್ಟಿನಲ್ಲಿ ಕೋಲಾರದಲ್ಲಿ ಕೆಂಪುಹಣ್ಣು ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಏರಿಕೆಯಿಂದಾಗಿ, ಗ್ರಾಹಕರು ಚಿಲ್ಲರೆ ಅಂಗಡಿಯಗಳಲ್ಲಿ ಟೊಮೆಟೊ ಕೊಳ್ಳಲು ಆಗುತ್ತಿಲ್ಲ. ಒಂದು ಕೆಜಿ ಟೊಮೆಟೊ ಬೆಲೆ ಚಿಲ್ಲರೆ ಅಂಗಡಿಯಲ್ಲಿ 70 ರಿಂದ 90 ರೂಪಾಯಿ ಇದ್ದು, ದಿಢೀರ್ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ಟೊಮೆಟೊ ಇಳಿಕೆ ಪ್ರಮಾಣ ಹೆಚ್ಚುವ ತನಕ ಟೊಮೆಟೊ ಬೆಲೆ ಇಳಿಕೆಯಾಗುವ ಲಕ್ಷಣ ಕಾಣಿಸಿತ್ತಿಲ್ಲ ಎಂದು ಕೋಲಾರ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.