ನಿಮ್ಮತ್ರ ಹಳೆಯ 500 ರೂ. ನೋಟಿದ್ರೆ ನೀವು ಕುಳಿತಲ್ಲೇ 10 ಸಾವಿರ ಸಂಪಾದಿಸಬಹುದು: ಷರತ್ತು ಅನ್ವಯ

ನಿಮ್ಮತ್ರ ಹಳೆಯ 500 ರೂ. ನೋಟಿದ್ರೆ ನೀವು ಕುಳಿತಲ್ಲೇ 10 ಸಾವಿರ ಸಂಪಾದಿಸಬಹುದು: ಷರತ್ತು ಅನ್ವಯ

ನಿಮ್ಮತ್ರ ಹಳೆಯ 500 ರೂ. ನೋಟಿದ್ರೆ ನೀವು ಕುಳಿತಲ್ಲೇ 10 ಸಾವಿರ ಸಂಪಾದಿಸಬಹುದು: ಷರತ್ತು ಅನ್ವಯ!

ನವದೆಹಲಿ: ನೋಟು ಬ್ಯಾನ್​ ಆದ ಬಳಿಕ ಇನ್ಮುಂದೆ ಯಾವುದಕ್ಕೂ ಪ್ರಯೋಜನಾ ಇಲ್ಲ ಅಂತಾ ನಿಮ್ಮ ಬಳಿ ಇದ್ದ ಹಳೆಯ 500 ರೂಪಾಯಿ ನೋಟನ್ನು ಎಲ್ಲಿಯಾದ್ರೂ ಎತ್ತಿ ಇಟ್ಟಿದ್ರೆ ಈ ಕೂಡಲೇ ಹುಡುಕಿಕೊಳ್ಳಿ ಏಕೆಂದ್ರೆ ನೀವು ಅದೇ ಹಳೆಯ ನೋಟಿನಿಂದ ಕುಳಿತಲ್ಲೇ 10 ಸಾವಿರ ರೂ. ಸಂಪಾದಿಸಬಹುದು. ಅದು ಹೇಗೆ ಅಂತಾ ತಿಳಿಯುವ ಕುತೂಹಲ ನಿಮ್ಮಲ್ಲಿದ್ದರೆ ಮುಂದೆ ಓದಿ…

2016 ನವೆಂಬರ್​ 8ರಂದು ಪ್ರಧಾನಿ ನರೇಂದ್ರ ಮೋದಿ ಒಂದು ಮಹತ್ವದ ಘೋಷಣೆಯನ್ನು ಮಾಡಿದ್ದರು. ಅಲ್ಲಿಯವರೆಗೂ ಚಲಾವಣೆಯಲ್ಲಿದ್ದ ಹಳೆಯ 1000 ಮತ್ತು 500 ರೂಪಾಯಿಗಳನ್ನು ಬ್ಯಾನ್​ ಮಾಡಿದ್ದರು. ಗಮನಾರ್ಹ ವಿಷಯವೆಂದರೆ, ಭಾರತೀಯ ರಿಸರ್ವ್ ಬ್ಯಾಂಕ್ ಒಂದು ಕರೆನ್ಸಿಯನ್ನು ನೀಡಿದಾಗ ಅದನ್ನು ಸ್ಥಿರ ಮಾದರಿಯೊಂದಿಗೆ ಮುದ್ರಿಸಲಾಗುತ್ತದೆ. ಆದ್ದರಿಂದ, ಕೆಲವು ನೋಟುಗಳು ಒಂದೇ ರೀತಿ ಕಾಣುವ ಸಾಧ್ಯತೆ ಇರುತ್ತದೆ. ಆದರೆ, ಅವುಗಳು ತಮ್ಮದೇ ಆದ ಕೆಲವು ವಿಶಿಷ್ಟತೆಯನ್ನು ಸಹ ಹೊಂದಿರುತ್ತವೆ.

ಇದೀಗ ಹಳೆಯ 500 ರೂಪಾಯಿ ನೋಟನ್ನು ಭಾರತದ ಅಪರೂಪದ ಕರೆನ್ಸಿ ಎಂಬ ವರ್ಗಕ್ಕೆ ಸೇರಿಸಲಾಗಿದೆ. ನಿಮ್ಮ ಬಳಿ ಏನಾದರೂ ಹಳೆಯ ನೋಟಿದ್ದರೆ, ಅದರ ಸೀರಿಯಲ್​ ನಂಬರ್​ ಅನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಒಂದು ವೇಳೆ ನಿಮ್ಮ ಬಳಿಯಿರುವ ನೋಟಿನಲ್ಲಿ ಸೀರಿಯಲ್​ ನಂಬರ್ ಎರಡು ಬಾರಿ ಮುದ್ರಿತಗೊಂಡಿದ್ದರೆ, ನೀವು 5000 ಸಂಪಾದಿಸಲು ಅದು ಸಹಾಯವಾಗುತ್ತದೆ.

ಒಂದು ವೇಳೆ ನಿಮ್ಮ ಬಳಿಯಿರುವ 500 ರೂಪಾಯಿ ನೋಟು ಸಾಮಾನ್ಯ ನೋಟಿಗಿಂತ ದೊಡ್ಡದಾಗಿದ್ದರೆ ನೀವು 10 ಸಾವಿರ ರೂ. ಸಂಪಾದಿಸಬಹುದಾಗಿದೆ. ಅದಕ್ಕೆ ನೀವು ಏನು ಮಾಡಬೇಕಾಗಿರುವುದು Quickr ಅಥವಾ Coinbazzar.com ನಂತಹ ಹಣಕ್ಕೆ ಬದಲಾಗಿ ನೋಟುಗಳನ್ನು ಸ್ವೀಕರಿಸುವ ವೆಬ್‌ಸೈಟ್ ಅನ್ನು ಹುಡುಕಬೇಕು.

Qucikr ಮತ್ತು Coinbazzr ಹೊರತಾಗಿ, ಹಲವಾರು ಇತರ ವೆಬ್‌ಸೈಟ್‌ಗಳಿವೆ, ಅಲ್ಲಿ ಹಣಕ್ಕೆ ಬದಲಾಗಿ ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ವ್ಯಾಪಾರ ಮಾಡಲಾಗುತ್ತದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಮೋಸ ಮಾಡುವ ಅನೇಕರಿದ್ದಾರೆ. ಇಂತಹ ಜಾಲತಾಣಗಳಲ್ಲಿ ವ್ಯವಹರಿಸುವಾಗ ಸ್ವಲ್ಪ ಜಾಗರೂಕತೆ ವಹಿಸುವುದು ಉತ್ತಮ