ನಮ್ಮ ಕ್ಲಿನಿಕ್‌ಗೆ ಸಚಿವ ಕೆ.ಗೋಪಾಲಯ್ಯ ದಿಢೀರ್ ಭೇಟಿ

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿನ ನಮ್ಮ ಕ್ಲಿನಿಕ್ ಗೆ ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ದಿಢೀರ್ ಭೇಟಿ ನೀಡಿದರು.
ನಮ್ಮ ಕ್ಲಿನಿಕ್ ನಲ್ಲಿ ಜನಸಾಮಾನ್ಯರಿಗೆ ಉಚಿತವಾಗಿ ಬಿಪಿ, ಶುಗರ್, ಥೈರಾಯಿಡ್ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಪರೀಕ್ಷೆಗಳನ್ನು ಉಚಿತವಾಗಿ ಮಾಡುವಂತೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಲಹೆ, ಸೂಚನೆಗಳನ್ನು ನೀಡಿದರು.
ಆರೋಗ್ಯ ಚಿಕಿತ್ಸೆಯನ್ನು ಪಡೆದುಕೊಳ್ಳಲು ಕ್ಲಿನಿಕ್ ಗೆ ಬಂದಿದ್ದ ಸಾರ್ವಜನಿಕರನ್ನು ಭೇಟಿ ಮಾಡಿ ನಮ್ಮ ಕ್ಲಿನಿಕ್ ನಲ್ಲಿ ಇರುವಂತಹ ಸೌಲಭ್ಯವನ್ನು ಸದುಪಯೋಗ ಪಡೆದುಕೊಂಡು ಆರೋಗ್ಯವಾದ ಜೀವನವನ್ನು ನಡೆಸುವಂತೆ ತಿಳಿಸಿದರು.
ನಮ್ಮ ಕ್ಲಿನಿಕ್ ಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮೂಲ ಸೌಕರ್ಯಗಳು ಅವಶ್ಯಕತೆ ಇದ್ದಲ್ಲಿ ಖುದ್ದಾಗಿ ಅಥವಾ ಕರೆ ಮಾಡಿ ತಿಳಿಸಿ ಎಂದು ಸ್ಥಳೀಯ ಶಾಸಕನಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಹಾಲಕ್ಷ್ಮಿ ಲೇಔಟ್ ನ ಎಂಹೆಚ್‌ಓ ಮಂಜುಳಾ, ಡಾ. ಚೇತನ್, ಡಾ. ನಾಗೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.