ರಾಜಕಾರಣಿ ಎಂದರೆ ಜನರ ಮೇಲೆ ಫಾರ್ಚುನರ್‌ ಹರಿಸುವುದಲ್ಲ: ಉ. ಪ್ರ ಬಿಜೆಪಿ ಅಧ್ಯಕ್ಷ

ರಾಜಕಾರಣಿ ಎಂದರೆ ಜನರ ಮೇಲೆ ಫಾರ್ಚುನರ್‌ ಹರಿಸುವುದಲ್ಲ: ಉ. ಪ್ರ ಬಿಜೆಪಿ ಅಧ್ಯಕ್ಷ

ಲಖನೌ: ರಾಜಕಾರಣಿ ಎಂದರೆ ಜನರನ್ನು ಲೂಟಿ ಮಾಡುವುದಲ್ಲ, ಜನರ ಮೇಲೆ ಫಾರ್ಚುನರ್‌ ಹರಿಸುವುದಲ್ಲ ಎಂದು ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ.

ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಒಬ್ಬರ ನಡವಳಿಕೆಯ ಆಧಾರದ ಮೇಲೆ ಚುನಾವಣೆ ಗೆಲ್ಲಬೇಕು. ರಾಜಕೀಯ ಎಂದರೆ ನಿಮ್ಮ ಸಮಾಜ ಮತ್ತು ನಿಮ್ಮ ರಾಷ್ಟ್ರದ ಸೇವೆ. ಇದರಲ್ಲಿ ಯಾವುದೇ ಜಾತಿ ಮತ್ತು ಧರ್ಮದ ಸಂಬಂಧವಿಲ್ಲ. ರಾಜಕೀಯ ನಾಯಕರಾಗಿರುವುದು ಎಂದರೆ ಲೂಟಿ ಮಾಡುವುದಲ್ಲ. ಫಾರ್ಚುನರ್‌ ಅನ್ನು ಯಾರ ಮೇಲಾದರೂ ಹರಿಸುವುದಲ್ಲ. ಬಡವರ ಸೇವೆಗಾಗಿ ನಾವು ಈ ಪಕ್ಷದಲ್ಲಿದ್ದೇವೆ,' ಎಂದು ಅವರು ಹೇಳಿದರು