ಹೊಸ ವರ್ಷಕ್ಕೆ ತಾಯಿ ಮಗುವನ್ನು ಬದುಕಿಸಿದ ಎಂಬುಲೆನ್ಸ್ EMT ಪರುಶರಾಮ

ಹೊಸ ವರ್ಷಕ್ಕೆ ಎಲ್ಲರೂ ಪಾರ್ಟಿ ಮೋಜು ಮಸ್ತಿ ಅಂತ ಬ್ಯುಸಿ ಇರತಾರೆ ಆದ್ರೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ವರುರ108 ಆಂಬ್ಯುಲೆನ್ಸ್ ಚಾಲಕ ಶಿವಾನಂದ ಮತ್ತು Emergency Medical Technician ಪರುಶರಾಮನ ಸಮಯ ಪ್ರಜ್ಞೆಯಿಂದ ಹೊಸ ವರ್ಷಕ್ಕೆ ಬೆಳಗಿನ ಜಾವ ಎರಡು ಜೀವಗಳನ್ನು ಉಳಿಸಿದ್ದಾನೆ.
ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದ ಲಕ್ಷ್ಮಿ ಪೂಜಾರ ಎಂಬ ಮಹಿಳೆಗೆ ಇಂದು ಬೆಳಗಿನ ಜಾವ 4 ಘಂಟೆಗೆ ತೀವ್ರ ಹೆರಿಗೆ ಬೇನೆ ಬಂದಿದೆ. ಈ ಸಮಯದಲ್ಲಿ ಆಸ್ಪತ್ರೆಗೆ ಹೋಗುವುದು ಹೇಗೆ ಅಂತ ಚಿಂತೆಯಲ್ಲಿದ್ದ ಪೋಷಕರಿಗೆ ದೈವ ಸ್ವರೂಪದಲ್ಲಿ ಬಂದು ಕಾಪಾಡಿದ್ದು ಇದೆ 108 ಸಿಬ್ಬಂದಿ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ತುಂಬು ಗರ್ಭಿಣಿಗೆ 108 ಆಂಬ್ಯುಲೆನ್ಸ್ ಸಿಬ್ಬಂದಿ ಅನಿವಾರ್ಯವಾಗಿ ಎಂಬುಲೆನ್ಸ್ ನಲ್ಲೆ ಹೆರಿಗೆ ಮಾಡಿ ತಾಯಿ ಮಗು ಇಬ್ಬರನ್ನು ಬದುಕಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. 108 ಸಿಬ್ಬಂದಿಯ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಸ ವರ್ಷಕ್ಕೆ ಕಣ್ಣು ತೆರೆದ ಈ ಮುದ್ದು ಕಂದನ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಒಟ್ಟಾರೆ ಸಮಯ ಪ್ರಜ್ಞೆ ಮೆರೆದು 2 ಜೀವ ಉಳಿಸಿದ ಎಂಬುಲೆನ್ಸ್ ಸಿಬ್ಬಂದಿ ಶಿವಾನಂದ ಮತ್ತು ಪರುಶರಾಮನಿಗೆ 9 ಲೈವ್ ನಿಂದ ಒಂದು ಸೆಲ್ಯೂಟ್