ವಿನಯ ಕುಲಕರ್ಣಿ ಅಭಿಮಾನಿ ಬಳಗದಿಂದ ಟಾಟಾ ಕಾರ್ಮಿಕರ ಧರಣಿಗೆ ಬೆಂಬಲ

ಧಾರವಾಡದ ಟಾಟಾ ಮಾರ್ಕೊಪೊಲ್ ಕಾರ್ಮಿಕರಿಗೆ ಹೊಸ ವೇತನ ಹಾಗೂ ಒಪ್ಪಂದದಂತೆ ಬಾಕಿ ಉಳಿದಿರುವ ವೇತನವನ್ನು ನೀಡಿ,ವಜಾಗೊಂಡ ಕಾರ್ಮಿಕರನ್ನು ಮರು ಸೇರ್ಪಡಿಸುವಂತೆ ಆಗ್ರಹಿಸಿ ನೂರಾರು ಸಂಖ್ಯೆಯ ಕಾರ್ಮಿಕರು ಇತ್ತಿಚೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು.
ಇಂದು ಟಾಟಾ ಮಾರ್ಕೋಪೊಲೊ ಕಾರ್ಮಿಕರ ಧರಣಿಯನ್ನು ಬೆಂಬಲಿಸಿ ವಿನಯ ಕುಲಕರ್ಣಿ ಅಭಿಮಾನಿ ಬಳಗ ಹಾಗು ಧಾರವಾಡ ತಾಲೂಕಿನ ಗ್ರಾಮೀಣ ಕಾಂಗ್ರೆಸ್ ಪಕ್ಷ ಧರಣಿ ಮಾಡುವ ಮೂಲಕ ಬೆಂಬಲವನ್ನು ನೀಡಿದೆ.
ಟಾಟಾ ಮಾರ್ಕೊಪೊಲೊ ಹಾಗೂ ಕಾರ್ಮಿಕ ಸಂಘದ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಕಳೆದ ಎರಡು ವರ್ಷಗಳಿಂದ ನಡೆಯುತ್ತಾ ಬಂದಿದೆ. ಕಾರ್ಮಿಕರ ಕ್ರಾಂತಿಕಾರಿ ಸಂಘ ಹಾಗೂ ಟಾಟಾ ಆಡಳಿತ ಮಂಡಳಿ ಕಂಪನಿಯ ಆಂತರಿಕ ತಿಕ್ಕಾಟದಿಂದ ಕಂಪನಿ ಲಾಕೌಟ್ ಕೂಡ ಮಾಡಿತ್ತು. ಇದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಂದಿದ್ದು ಇತಿಹಾಸವಾಗಿತ್ತು .ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಸತತ ಪ್ರಯತ್ನದಿಂದ ಟಾಟಾ ಮಾರ್ಕೊಪೋಲ್ ಜೊತೆಗಿನ ಸಂಧಾನ ಯಶಸ್ವಿಯಾಗಿತ್ತು. ಆದರೆ ಇಂದು ತಮ್ಮ ಬೇಡಿಕೆಗಳನ್ನು ಆಡಳಿತ ಮಂಡಳಿ ಇಲ್ಲಿಯವರೆಗೂ ಈಡೇರಿಸಿಲ್ಲ ಎಂದು ಆರೋಪಿಸಿ ಮತ್ತೊಂದು ಹೋರಾಟಕ್ಕೆ ಕಾಲಿಟ್ಟಿದ್ದಾರೆ.ಅಂತೆಯೇ ಇಂದು ಹಮ್ಮಿಕೊಂಡ ಬೃಹತ್ ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿ ಧರಣಿಗೆ ಕಾಂಗ್ರೆಸ್ ದ ಕೂಡಾ ಬೆಂಬಲಕ್ಕೆ ನಿಂತಿದೆ.
ಈ ಸಂದರ್ಭದಲ್ಲಿ ಪ್ರಶಾಂತ ,ಸತೀಶ ತುರಮರಿ,ಪಾಲಿಕೆ ಸದಸ್ಯರಾದ ಸುರವ್ವ ಪಾಟಿಲ, ದೀಪಾ ನೀರಲಕಟ್ಟಿ,,ಶಾಂತಮ್ಮ ಗುಜ್ಜಳ,ಶಿವಶಂಕರ ಹಂಪಣ್ಣವರ, ನಾಗರಾಜ ಗೌರಿ,ಆನಂದ ಸಿಂಗನಾಥ,ಮಹಬೂಬ ಮುಲ್ಲಾ,ಸಂತೊಷ ನಿರಲಕಟ್ಟಿ,ಬಸವರಾಜ ಜಾದವ,ಇಮ್ರಾನ ಕಳ್ಳಿಮನಿ,ಅರುಣಕುಮಾರ ಮಜ್ಜಗಿ,ಶಿವಾನಂದ ಗಿರಿಯೆಪ್ಪನವರ,ನವಿನ ಕದಂ,ಚಿನ್ನಿ ಬಸು, ಶಿವು ಚೆನ್ನಗೌಡ್ರ,ನೂರಹ್ಮದ ನಧಾಪ,ಅಶೊಕ ದೊಡಮನಿ,ಪ್ರಕಾಶ ಬಾವಿಕಟ್ಟಿ,ಸಂಜಯ ತುದಿಗಾಲ,ಸಂತೊಷ ಬೇಟಗೆರಿ,,ಪ್ರಬಾವತಿ ವಡ್ಡಿನ,ಶೊಬಾ ಅಣ್ಣಿಗೇರಿ,ಸುಮಾ ಮಿನಗನವರ,ಶಾಂತಾ ತೆಗೂರ, ಹಾಗು ವಿನಯ ಕುಲಕರ್ಣಿ ಅಭಿಮಾನಿ ಬಳಗದವರು ಕೂಡಾ ಉಪಸ್ಥಿತರಿದ್ದರು.