ಪೃಥ್ವಿ ಶಾ ಮೇಲೆ ಹಲ್ಲೆ: ಮಹಿಳೆ ಮೂರು ದಿನ ಪೊಲೀಸ್ ಕಸ್ಟಡಿಗೆ

ಪೃಥ್ವಿ ಶಾ ಮೇಲೆ ಹಲ್ಲೆ: ಮಹಿಳೆ ಮೂರು ದಿನ ಪೊಲೀಸ್ ಕಸ್ಟಡಿಗೆ
ಸೆಲ್ಫಿ ತೆಗೆಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಅವರ ಕಾರಿನ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಪ್ರಭಾವಿಯಾಗಿರುವ ಸಪ್ನಾ ಗಿಲ್ ಅವರನ್ನು ಫೆಬ್ರವರಿ 20ರವರೆಗೆ ಪೊಲೀಸ್ ಕಸ್ಟಡಿಗೆ ಮುಂಬೈ ನ್ಯಾಯಾಲಯ ಒಪ್ಪಿಸಿದೆ. ಮುಂಬೈ: ಸೆಲ್ಫಿ ತೆಗೆಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಅವರ ಕಾರಿನ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಪ್ರಭಾವಿಯಾಗಿರುವ ಸಪ್ನಾ ಗಿಲ್ ಅವರನ್ನು ಫೆಬ್ರವರಿ 20ರವರೆಗೆ ಪೊಲೀಸ್ ಕಸ್ಟಡಿಗೆ ಮುಂಬೈ ನ್ಯಾಯಾಲಯ ಒಪ್ಪಿಸಿದೆ.
ಉಪನಗರ ಸಾಂತಾಕ್ರೂಜ್ನ ಐಷಾರಾಮಿ ಹೋಟೆಲ್ನ ಹೊರಗೆ ಬುಧವಾರ ಮುಂಜಾನೆ ಈ ಘಟನೆ ನಡೆದಿತ್ತು. ಗುರುವಾರ ಸಂಜೆ ಸಪ್ನಾ ಗಿಲ್ ಅವರನ್ನು ಬಂಧಿಸಲಾಗಿತ್ತು. ಆಕೆಯ ಸ್ನೇಹಿತ ಶೋಭಿತ್ ಠಾಕೂರ್ ಮತ್ತು ಇತರ ಆರು ಮಂದಿ ವಿರುದ್ಧ ಗಲಭೆ ಮತ್ತು ಸುಲಿಗೆ ಆರೋಪದ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ.ಠಾಕೂರ್ ಮತ್ತು ಗಿಲ್ ಹೋಟೆಲ್ನಲ್ಲಿ ಸೆಲ್ಫಿಗಾಗಿ ಪೃಥ್ವಿ ಶಾ ಅವರನ್ನು ಸಂಪರ್ಕಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೆಲ್ಫಿ ತೆಗೆಸಿಕೊಳ್ಳಲು ನಿರಾಕರಿಸಿದ ಪೃಥ್ವಿ ಶಾ ಅವರೊಂದಿಗೆ ಗಿಲ್ ಮತ್ತು ಠಾಕೂರ್ ಅನುಚಿತವಾಗಿ ವರ್ತಿಸಿದ್ದರು. ಅವರಿಬ್ಬರು ಮದ್ಯದ ನಶೆಯಲ್ಲಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.