ಮನೀಶ್ ಸಿಸೋಡಿಯಾಗೆ 'ಸಿಬಿಐ' ಡ್ರಿಲ್ : ಧರಣಿ ನಡೆಸುತ್ತಿದ್ದ 'AAP' ಕಾರ್ಯಕರ್ತರು ಪೊಲೀಸ್ ವಶಕ್ಕೆ

ಮನೀಶ್ ಸಿಸೋಡಿಯಾಗೆ 'ಸಿಬಿಐ' ಡ್ರಿಲ್ : ಧರಣಿ ನಡೆಸುತ್ತಿದ್ದ 'AAP' ಕಾರ್ಯಕರ್ತರು ಪೊಲೀಸ್ ವಶಕ್ಕೆ

ವದೆಹಲಿ: ಮದ್ಯ ನೀತಿ ಪ್ರಕರಣಕ್ಕೆ ಸಂಬಂಧ ವಿಚಾರಣೆಗಾಗಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ(Manish Sisodia) ಅವರು ಸಿಬಿಐ ವಿಚಾರಣೆಗೆ ಒಳಗಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ದೆಹಲಿಯ ಸಿಬಿಐ ಕಚೇರಿ ಮುಂದೆ ಆಮ್ ಆದ್ಮಿ ಪಕ್ಷದಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ಸಮನ್ಸ್ ಖಂಡಿಸಿ ಧರಣಿ ನಡೆಸುತ್ತಿರುವ ಎಎಪಿ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದು, , ಆಮ್ ಆದ್ಮಿ ಪಕ್ಷದ ನಾಯಕರು, ಕಾರ್ಯಕರ್ತರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ದೆಹಲಿಯಲ್ಲಿರುವ ಸಿಬಿಐ ಕೇಂದ್ರ ಕಚೇರಿಗೆ ಹಾಜರಾಗುವಂತೆ ಮನೀಶ್ ಸಿಸೋಡಿಯಾಗೆ ಸಮನ್ಸ್ ನೀಡಲಾಗಿತ್ತು.

ʻಮುಂದಿನ ದಿನಗಳಲ್ಲಿ ನಾನು ಚುನಾವಣಾ ಪ್ರಚಾರಕ್ಕಾಗಿ ಗುಜರಾತ್‌ಗೆ ಹೋಗಬೇಕಾಗಿತ್ತು. ನಾನು ಗುಜರಾತ್‌ಗೆ ಹೋಗುವುದನ್ನು ತಡೆಯುವುದು ಅವರ ಉದ್ದೇಶವಾಗಿದೆ. ಗುಜರಾತ್‌ನಲ್ಲಿ ಸೋಲುತ್ತಿದೆ ಎಂದು ಬಿಜೆಪಿಗೆ ಗೊತ್ತಿರುವುದರಿಂದಲೇ ಅವರು ಕಂಗಾಲಾಗಿದ್ದಾರೆ. ಆದ್ರೆ, ನಾನು ಗುಜರಾತ್ ಚುನಾವಣಾ ಪ್ರಚಾರವನ್ನು ನಿಲ್ಲಿಸುವುದಿಲ್ಲʼ ಎಂದು ಸಿಸೋಡಿಯಾ ಅವರು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು