ಜಯಭೇರಿ ಬಾರಿಸಿದ ಕಾಂಗ್ರೆಸ್ ಅಭ್ಯರ್ಥಿ ಮೋನಿಷ ರಮೇಶ್ | Kolar |
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕೆ.ಜಿ.ಎಫ್ ತಾಲೂಕಿನ ರಾಬರ್ಟ್ ಸನ್ ಪೇಟೆ ನಗರಸಭೆ ವಾರ್ಡ್ ನಂ ಹನ್ನೆರಡರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮೋನಿಷ ರಮೇಶ್ ಬಹುಮತದಿಂದ ಗೆಲುವು ಸಾಧಿಸಿದ್ದಾರೆ. 12ನೇ ವಾರ್ಡಿನ ಸದಸ್ಯೆ ಜಯಂತಿರವರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ಸೆಪ್ಟೆಂಬರ್ ಮೂರರಂದು ಚುನಾವಣೆ ನಡೆದಿತ್ತು. ಇದೀಗ ಅವರ ಮಗಳಾದ ಮೋನಿಷ 696 ಮತಗಳಿಸಿ ತಮ್ಮ ಸಮೀಪ ಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಜಯದೇವಿ ವಿರುದ್ಧ 358 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಸಹಕರಿಸಿದ ಸ್ಥಳೀಯ ಜನರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.