ಇನಾಗುರೇಷನ್ ಫೈಟ್ | Kolar |
ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ ಹಾಲಿ ಹಾಗೂ ಮಾಜಿ ಆರೋಗ್ಯ ಸಚಿವರ ನಡುವಿನ ರಾಜಕೀಯ ಪ್ರತಿಷೆ್ಠಗೆ ವೇದಿಕೆಯಾಗಿದೆ. ಈಗಾಗಲೇ ಮಾಜಿ ಸಚಿವರು ಉದ್ಘಾಟನೆ ಮಾಡಿದ್ದ ಆಸ್ಪತ್ರೆಯನ್ನು ಇಂದು ಲೋಕರ‍್ಪಣೆ ಮಾಡಿದ ಹಾಲಿ ಅರೋಗ್ಯ ಸಚಿವರು ಇದೇ ಅಧಿಕೃತ ಎನ್ನುತ್ತಿದ್ದಾರೆ. ಇನಾಗುರೇಷನ್ ಫೈಟ್ ಕುರಿತು ಇಲ್ಲಿದೆ ನೋಡಿ ಮಾಹಿತಿ ಈಗಾಗಲೇ ಕಟ್ಟಡವನ್ನು ಲೋಕರ‍್ಪಣೆ ಮಾಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ ಮಾಡುತ್ತಿರುವ ಹಾಲಿ ಆರೋಗ್ಯ ಸಚಿವ ಸುಧಾಕರ್...ಮತ್ತೊಂದೆಡೆ ಜೆಡಿಎಸ್ ನಾಯಕರನ್ನ ಜೊತೆಯಲ್ಲಿರಿಸಿಕೊಂಡು ಕರ‍್ಯಕ್ರಮ ಮಾಡುತ್ತಿರುವ ಸುಧಾಕರ್..ಇದೆಲ್ಲಾ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಮುದುವಾಡಿಯಲ್ಲಿ ಕಂಡು ಬಂದ ದೃಶ್ಯಗಳು. ಮಾಜಿ ಆರೋಗ್ಯ ಸಚಿವ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಹಾಗೂ ಹಾಲಿ ಆರೋಗ್ಯ ಸಚಿವ ಕೆ.ಸುಧಾಕರ್ ನಡುವಿನ ರಾಜಕೀಯ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ. ಪರಿಣಾಮ ರಮೇಶ್ ಕುಮಾರ್ ಅವರ ಕ್ಷೇತ್ರದಲ್ಲಿ ಆರೋಗ್ಯ ಕೇಂದ್ರ ಉದ್ಘಾಟನೆ ವಿಚಾರ ಬಂದಾಗ ಅದನ್ನೇ ರಾಜಕೀಯ ಪ್ರತಿಷೆ್ಠಯ ವೇದಿಕೆಯಾಗಿ ಪರಿಗಣಿಸಿದ ಸಚಿವ ಸುಧಾಕರ್ ಆಗಸ್ಟ್ 26 ರಂದು ನಿಗದಿಯಾಗಿದ್ದ ಕರ‍್ಯಕ್ರಮವನ್ನು ರಾತ್ರೋ ರಾತ್ರಿ ರದ್ದು ಮಾಡಿದ್ದರು. ಆದರೆ ರಮೇಶ್ ಕುಮಾರ್ ತಮ್ಮ ಪಾಡಿಗೆ ತಾವು ಆರೋಗ್ಯ ಕೇಂದ್ರಗಳನ್ನು ಏಕಾಂಗಿಯಾಗಿ ಉದ್ಘಾಟನೆ ಮಾಡಿದ್ರು. ಆದರೆ ಇದೇ ವಿಚಾರವಾಗಿ ರಮೇಶ್ ಕುಮಾರ್ ಅವರಿಗೆ ಟಾಂಗ್ ಕೊಡಲು ನರ‍್ಧರಿಸಿದ್ದ ಸುಧಾಕರ್, ಇಂದು ಮತ್ತೊಮ್ಮೆ ಅದೇ ಆರೋಗ್ಯ ಕೇಂದ್ರಗಳ ಉದ್ಘಾಟನೆಗೆ ಶ್ರೀನಿವಾಸಪುರಕ್ಕೆ ಆಗಮಿಸಿದರು. ಈವೇಳೆ ಸಚಿವ ಸುಧಾಕರ್‍ಗೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಮುನಿಸ್ವಾಮಿ, ಸೇರಿ ಅಧಿಕಾರಿಗಳು ಸಾಥ್ ನೀಡಿದ್ದರು. ಮೊದಲು ಸಚಿವ ಸುಧಾಕರ್ ಅವರನ್ನು ಜೆಡಿಎಸ್ ಮುಖಂಡರು ಅದ್ದೂರಿ ಸ್ವಾಗತ ಕೋರಿದರು. ಮೊದಲು ಮುದುವಾಡಿ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ರ‍್ಪಿಸಿದ ನಂತರ ಸಚಿವ ಸುಧಾಕರ್ ಆಸ್ಪತ್ರೆ ಕಟ್ಟಡ ಉದ್ಘಾಟನೆ ಮಾಡಿದ್ರು. ನಂತರ ಇದೇನು ಉದ್ಘಾಟನಾ ರಾಜಕೀಯ ಮಾಡ್ತಿದ್ದೀರಾ ಎಂದು ಎದುರಾದ ಪ್ರಶ್ನೆಗೆ ಉತ್ತರಿಸಿದ ಸುಧಾಕರ್ ಇಂದು ಅಧಿಕೃತವಾಗಿ ಉದ್ಘಾಟನೆ ಮಾಡಲಾಗಿದೆ ಎಂದು ಸುಮ್ಮನಾದ್ರು. ಇನ್ನು ರಮೇಶ್ ಕುಮಾರ್ ಅವರ ಕ್ಷೇತ್ರದಲ್ಲೇ ಅವರಿಗೆ ಟಾಂಗ್ ಕೊಡಲು ಪ್ಲಾನ್ ಮಾಡಿದ್ದ ಬಿಜೆಪಿ ಮುಖಂಡರುಗಳು ಇಡೀ ಕರ‍್ಯಕ್ರಮದಲ್ಲಿ ರಮೇಶ್ ಕುಮಾರ್ ಅವರ ಹೆಸರು ಪ್ರಸ್ತಾಪ ಮಾಡಲಿಲ್ಲ. ಕರ‍್ಯಕ್ರಮದ ಫ್ಲೆಕ್ಸ್ ಹಾಗೂ ಬ್ಯಾನರ್‍ಗಳಲ್ಲೂ ಎಲ್ಲೂ ಅವರ ಫೋಟೋ ಇರಲಿಲ್ಲ. ಬದಲಾಗಿ ಅರಮೇಶ್ ಕುಮಾರ್ ಅವರ ರಾಜಕೀಯ ಎದುರಾಳಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರ ಫೋಟೋವನ್ನು ಹಾಕಿಸಲಾಗಿತ್ತು. ಒಟ್ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ ಹೆಸರಲ್ಲಿ ಹಾಲಿ ಮತ್ತು ಮಾಜಿ ಆರೋಗ್ಯ ಸಚಿವರುಗಳ ರಾಜಕೀಯ ಕೆಸರೆರೆಚಾಟ ಜೋರಾಗಿದೆ. ಸರ‍್ವಜನಿಕರ ಹಣದಲ್ಲಿ ಮಾಡಿದ ಅಭಿವೃದ್ದಿ ಕರ‍್ಯದಲ್ಲಿ ತಮ್ಮ ವೈಯಕ್ತಿಕ ಬೇಳೆ ಬೇಯಿಸಿಕೊಳ್ಳಲು ಮುಖಂಡರುಗಳು ವೇದಿಕೆ ಬಳಸಿಕೊಂಡಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು