ಸತತ 4 ಎಳೆತಗಳಲ್ಲಿ 4 ವಿಕೆಟ್ ಢಮಾರ್, ಆಸ್ಟ್ರೇಲಿಯಾ ಆಲ್ ಔಟ್, ಭಾರತಕ್ಕೆ ಭರ್ಜರಿ ಜಯ
ಬ್ರಿಸ್‍ಬೇನ್, ಅ. 17- ವಿಕೆಟ್, ವಿಕೆಟ್, ವಿಕೆಟ್, ವಿಕೆಟ್ ಇದು ಇಂದು ಆಸ್ಟ್ರೇಲಿಯಾ ಹಾಗೂ ಭಾರತ ನಡುವೆ ನಡೆದ ಅಂತಿಮ ಓವರ್‍ನ ಮ್ಯಾಜಿಕ್. ಭಾರತ ನೀಡಿದ 187 ರನ್‍ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಕೊನೆಯ ಓವರ್‍ನವರೆಗೂ ಗೆಲುವಿನ ಹೊಸ್ತಿಲಲ್ಲೇ ಇತ್ತಾದರೂ, ಪಂದ್ಯದ ಕೊನೆಯ ಓವರ್‍ನಲ್ಲಿ ಸ್ಟ್ಯಾಂಡ್ ಬೈ ಆಟಗಾರನ ರೂಪದಲ್ಲಿ ಬಂದ ಮೊಹಮ್ಮದ್ ಶಮಿ ಅವರು ಮಾಡಿದ ಬೌಲಿಂಗ್ ಜಾದೂವಿನಿಂದಾಗಿ ರೋಹಿತ್ ಪಡೆಯು 6 ವಿಕೆಟ್‍ಗಳ ರೋಚಕ ಗೆಲುವು ಸಾಧಿಸಿತು.
20ನೆ ಓವರ್‍ನ ಮೊದಲೆರಡು ಎಸೆತಗಳಲ್ಲಿ ಅಲೌಂಡರ್ ಪ್ಯಾಟ್ ಕಮ್ಮಿನ್ಸ್ ಅವರು 4 ರನ್‍ಗಳನ್ನು ಕಲೆ ಹಾಕಿದರು. ಆದರೆ ಪಂದ್ಯದ 3ನೆ ಎಸೆತದಲ್ಲಿ ಪ್ಯಾಟ್ ಕಮ್ಮಿನ್ಸ್ ಚೆಂಡನ್ನು ಬೌಂಡರಿಗಟ್ಟಿದ್ದರಾದರೂ ವಿರಾಟ್ ಕೊಹ್ಲಿಅವರ ಚುರುಕಿನ ಫೀಲ್ಡಿಂಗ್‍ನಿಂದಾಗಿ ವಿಕೆಟ್ ಕೈ ಚಲ್ಲಿದರು. ನಂತರ ಬಂದ ಬ್ಯಾಟ್ಸ್‍ಮನ್‍ಗಳು ಮಾರ್ಚ್‍ಫಾಸ್ಟ್ ಮಾಡಿದರು.
19.4ನೆ ಓವರ್‍ನಲ್ಲಿ ಅಸ್ಟರ್ ಅಗರ್ ವಿರಾಟ್ ಕೊಹ್ಲಿಯ ಮಿಂಚಿನ ಫೀಲ್ಡಿಂಗ್‍ಗೆ ರನೌಟ್ ಆದರೆ, 19.5ನೆ ಓವರ್‍ನಲ್ಲಿ ಜೋಶ್ ಇಂಗಿಸ್ ಮೊಹಮ್ಮದ್ ಶಮಿ ಓವರ್‍ನಲ್ಲಿ ಕ್ಲೀನ್‍ಬೌಲ್ಡ್ ಆದರೂ, 19.6ನೆ ಓವರ್‍ನಲ್ಲೂ ಕೂಡ ಕೇನ್ ವಿಲಿಯಮ್ಸ್ ಅವರನ್ನು ಮೊಹಮ್ಮದ್ ಶಮಿ ಕ್ಲೀನ್ ಬೌಲ್ಡ್ ಮಾಡಿ ಭಾರತಕ್ಕೆ 6 ವಿಕೆಟ್‍ಗಳ ಗೆಲುವು ತಂದುಕೊಟ್ಟರು.
ವ್ಯರ್ಥವಾದ ನಾಯಕ ಆಟ:
ಇದಕ್ಕೂ ಮುನ್ನ ಆಸ್ಟ್ರೇಲಿಯಾದ ನಾಯಕ ಆರೋನ್ ಫಿಂಚ್ ಅವರು ಸ್ಪೋಟಕ ಆಟ ಪ್ರದರ್ಶಿಸಿ (76 ರನ್, 7 ಬೌಂಡರಿ, 3 ಸಿಕ್ಸರ್) ಆಕರ್ಷಕ ಅರ್ಧಶತಕ ಗಳಿಸಿ ತಂಡಕ್ಕೆ ಗೆಲುವು ತಂದುಕೊಡುವ ಲಕ್ಷಣ ತೋರಿದರು. ಇವರಿಗೆ ಆರಂಭಿಕ ಆಟಗಾರ ಮೈಕಲ್ ಮಾರ್ಷ್ ( 35 ರನ್, 4 ಬೌಂಡರಿ, 2 ಸಿಕ್ಸರ್) ಹಾಗೂ ಗ್ಲೆನ್ ಮ್ಯಾಕ್ಸ್‍ವೆಲ್ ( 23 ರನ್, 4 ಬೌಂಡರಿ) ಉತ್ತಮ ಸಾಥ್ ನೀಡಿದರೂ ಉಳಿದ ಬ್ಯಾಟ್ಸ್‍ಮನ್‍ಗಳು ಎಡವಿದ್ದರಿಂದ ನಿಗತ 20 ಓವರ್‍ಗಳಲ್ಲಿ ಆಸ್ಟ್ರೇಲಿಯಾ 180ಕ್ಕೆ ಸರ್ವಪತನಗೊಂಡಿತು.
ರಾಹುಲ್- ಸೂರ್ಯ ಅರ್ಧಶತಕ:
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಾಯಕ ರೋಹಿತ್ ಶರ್ಮಾ (15 ರನ್, ವಿರಾಟ್ ಕೊಹ್ಲಿ (19 ರನ್, 1 ಬೌಂಡರಿ, 1 ಸಿಕ್ಸರ್)ರ ವಿಕೆಟ್ ಅನ್ನು ಬಲು ಬೇಗ ಕಳೆದುಕೊಂಡರೂ ಆರಂಭಿಕ ಆಟಗಾರ, ಉಪನಾಯಕ ಕೆ.ಎಲ್.ರಾಹುಲ್ (57 ರನ್, 6 ಬೌಂಡರಿ, 3 ಸಿಕ್ಸರ್) ಹಾಗೂ ಸೂರ್ಯಕುಮಾರ್ ಯಾದವ್ ( 50 ರನ್, 6 ಬೌಂಡರಿ, 1ಸಿಕ್ಸರ್) ಆಕರ್ಷಕ ಅರ್ಧಶತಕದ ನೆರವಿನಿಂದ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿದರು.
ಆಸ್ಟ್ರೇಲಿಯಾ ಪರ ಕೇನ್ ರಿಚರ್ಡ್‍ಸನ್ 4 ವಿಕೆಟ್, ಮೈಕಲ್ ಸ್ಟ್ರಾಕ್, ಗ್ಲೆನ್ ಮ್ಯಾಕ್ಸ್‍ವೆಲ್, ಅಸ್ಟನ್ ಆಗರ್ ತಲಾ 1 ವಿಕೆಟ್ ಕಬಳಿಸಿದರು. ಭಾರತ ತನ್ನ ಮುಂದಿನ ಅಭ್ಯಾಸ ಪಂದ್ಯವನ್ನು ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ.