ಕ್ರಾಂತಿ' ಪ್ರಚಾರದ ವೇಳೆ ದರ್ಶನ್ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿ

ಕ್ರಾಂತಿ' ಪ್ರಚಾರದ ವೇಳೆ ದರ್ಶನ್ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಬಳಿಕ ಹೊಸಪೇಟೆಗೆ ತೆರಳಿ ಅಲ್ಲಿ 'ಕ್ರಾಂತಿ'ಯ 2ನೇ ಹಾಡನ್ನು ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಹೀಗಾಗಿ ಇಡೀ ಚಿತ್ರತಂಡ ಹೊಸಪೇಟೆಗೆ ತೆರಳಿತ್ತು. ದರ್ಶನ್ ನೋಡಲು ಅವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿತ್ತು. ವೇದಿಕೆ ಮೇಲೆ ಇನ್ನೇನು ರಚಿತಾ ರಾಮ್ ಮಾತಾಡಲು ಮುಂದಾಗಿದ್ದರಷ್ಟೇ. ಈ ವೇಳೆ ಯಾರೋ ಕಿಡಿಗೇಡಿ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದಾರೆ. ಇದು ವಿಡಿಯೋದಲ್ಲಿ ಸೆರೆಯಾಗಿದೆ.