'ಕೆಜಿಎಫ್' ಚಿತ್ರಕ್ಕೆ 4 ವರ್ಷ; ಇತಿಹಾಸ ಸೃಷ್ಟಿಸಿದ ದಿನ ನೆನೆದ ಹೊಂಬಾಳೆ ಫಿಲ್ಮ್ಸ್​

'ಕೆಜಿಎಫ್' ಚಿತ್ರಕ್ಕೆ 4 ವರ್ಷ; ಇತಿಹಾಸ ಸೃಷ್ಟಿಸಿದ ದಿನ ನೆನೆದ ಹೊಂಬಾಳೆ ಫಿಲ್ಮ್ಸ್​

ಅದು 2018ರ ಡಿ.21. ಸಿನಿಪ್ರಿಯರು ಆ ದಿನಕ್ಕಾಗಿ ಕಾದು ಕೂತಿದ್ದರು. ಅದು ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ ‘KGF: ಚಾಪ್ಟರ್ 1’ ರಿಲೀಸ್ ದಿನಾಂಕ. ಅನಂತ್ ನಾಗ್ ಧ್ವನಿಯಲ್ಲಿ ಮೂಡಿ ಬಂದ ನಿರೂಪಣೆ ಈ ಚಿತ್ರದ ತೂಕವನ್ನೇ ಹೆಚ್ಚಿಸಿತ್ತು. ಎಲ್ಲರಿಂದ ಸೈ ಎನಿಸಿಕೊಂಡಿತ್ತು. ಅಲ್ಲದೇ ಸಿನಿ ಇತಿಹಾದಲ್ಲಿ ನೂರಾರೂ ಕೋಟಿ ಬಾಚಿಕೊಂಡಿತ್ತು. ಈ ವಿಶೇಷ ದಿನಕ್ಕೆ ಈಗ 4 ವರ್ಷ ತುಂಬಿದೆ. ಈ ವಿಶೇಷ ದಿನವನ್ನು ನೆನಪಿಸಿಕೊಳ್ಳಲು ಹೊಂಬಾಳೆ ಫಿಲ್ಮ್ಸ್ ವಿಡಿಯೋ ಒಂದನ್ನು ಮಾಡಿ ಹಂಚಿಕೊಂಡಿದೆ.