ಕೊರೋನಾ ಸೋಂಕಿತರ ನೆರವಿಗೆ ನಿಂತ ಜೆಕೆ ಅಭಿನಯದ ಐರಾವನ್​ ಚಿತ್ರತಂಡ..!

ಜಯರಾಮ್​ ಕಾರ್ತಿಕ್​ ಅಭಿನಯದ ಸಿನಿಮಾ ಐರಾವನ್​ ಚಿತ್ರತಂಡ ಕೋವಿಡ್​ ಸೋಂಕಿತರ ನೆರವಿಗೆ ನಿಂತಿದೆ. ಸಾಕಷ್ಟು ಕಡೆ ಜನರು ಬೆಡ್​ ಹಾಗೂ ಆಕ್ಸಿಜನ್​ ಸಿಗದೆ ಪರೆದಾಡುತ್ತಿದ್ದಾರೆ. ಹೀಗಿರುವಾಗಲೇ ಆಕ್ಸಿಜನ್​ ಸಹಿತ ಆಂಬ್ಯುಲೆನ್ಸ್​ ಅನ್ನು ಕೋವಿಡ್​ ಸೋಂಕಿತರ ಸೇವೆಗೆ ಸಮರ್ಪಿಸಿದೆ ಐರಾವನ್​ ಚಿತ್ರತಂಡ. ಆರೋಗ್ಯ ಭಾರತಿ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ಐರಾವನ್ ಚಿತ್ರತಂಡ ಸಹ ಕೊರೋನಾ ಸೋಂಕಿತರ ನೆರವಿಗೆ ನಿಂತಿದೆ. ಚಿತ್ರದ ನಿರ್ಮಾಪಕ ಡಾ. ನಿರಂತರ್ ಗಣೇಶ್ ಮತ್ತು ಚಿತ್ರ ನಾಯಕ ಜಯರಾಮ್ ಕಾರ್ತಿಕ್ ಹಾಗೂ ನಟ ವಿವೇಕ್ ಆಕ್ಸಿಜನ್ ಸಹಿತ ಆಂಬ್ಯುಲೆನ್ಸ್​ ಅನ್ನು ಬ್ಯಾಟರಾಯನಪುರ ವ್ಯಾಪ್ತಿಗೆ ನೀಡಿದ್ದಾರೆ.ಜೊತೆಗೆ 10 ಸಾವಿರ ಮೌಲ್ಯದ ಕೋವಿಡ್​ ಔಷಧಿ ಕಿಟ್​ಗಳನ್ನು​ ಅನ್ನು ಸಹ ಜನರಿಗೆ ವಿತರಿಸಿದೆ ಐರಾವನ್​ ಚಿತ್ರತಂಡ. ಆಕ್ಸಿಜನ್​ ವ್ಯವಸ್ಥೆ ಇರುವ ಈ ಆಂಬ್ಯುಲೆನ್ಸ್​ ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ ಸೇವೆಗೆ ಲಭ್ಯವಿದೆ.

ಕೊರೋನಾ ಸೋಂಕಿತರ ನೆರವಿಗೆ ನಿಂತ ಜೆಕೆ ಅಭಿನಯದ ಐರಾವನ್​ ಚಿತ್ರತಂಡ..!